ಹೋಂಡುರಾಸ್- ಈಕ್ವೆಡಾರ್ ಕದನ
ಲೆಕ್ಕಾಚಾರದಲ್ಲಿ ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಹೆಚ್ಚೂಕಡಿಮೆ...
ಕ್ಯೂರಿಟಿಬಾ: ಲೆಕ್ಕಾಚಾರದಲ್ಲಿ ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಹೆಚ್ಚೂಕಡಿಮೆ ಸಮಬಲ ಸಾಧಿಸಿರುವ ಹೋಂಡುರಾಸ್ ಮತ್ತು ಈಕ್ವೆಡಾರ್ ತಂಡಗಳು ಶುಕ್ರವಾರ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯದಲ್ಲಿ ಪರಸ್ಪರ ಹೋರಾಟ ನಡೆಸಲಿವೆ.
ಇದುವರೆಗೂ ಉಭಯ ತಂಡಗಳು 13 ಪಂದ್ಯಗಳನ್ನಾಡಿದ್ದು, ಅವೆಲ್ಲವೂ ಸೌಹಾರ್ದ ಪಂದ್ಯಗಳಾಗಿವೆ. ಇದರಲ್ಲಿ 8 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಉಳಿದ 5 ಪಂದ್ಯಗಳಲ್ಲಿ ಮೂರರಲ್ಲಿ ಈಕ್ವೆಡಾರ್ ಜಯ ಸಾಧಿಸಿದರೆ, ಎರಡು ಪಂದ್ಯಗಳಲ್ಲಿ ಹೋಂಡುರಾಸ್ ಜಯ ಕಂಡುಕೊಂಡಿದೆ. ಹೀಗಾಗಿ, ಈ ಹಿಂದಿನ ದಾಖಲೆಗಳ ಪ್ರಕಾರ ಈಕ್ವೆಡಾರ್ ಕೊಂಚ ಪ್ರಬಲ ತಂಡವೆನಿಸಿದೆ. ಕಳೆದ ನವೆಂಬರ್ನಲ್ಲಿ ಅಮೆರಿಕದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 2-2 ಗೋಲುಗಳಿಂದ ಡ್ರಾ ಸಾಧಿಸಿದ್ದವು. ಹೀಗಾಗಿ ಉಭಯ ತಂಡಗಳು ಸಮಬಲದ ಶಕ್ತಿಯನ್ನು ಹೊಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಈ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಿಲಿದೆ ಎಂಬ ಕಾತರಲ್ಲಿದ್ದಾರೆ, ದಕ್ಷಿಣ ಆಮೆರಿಕ ದೇಶವಾಗಿರುವ ಈಕ್ವೆಡಾರ್ ಮತ್ತು ಕೇಂದ್ರ ಅಮೆರಿಕ ರಾಷ್ಟ್ರವಾಗಿರುವ ಹೋಂಡುರಾಸ್ನ ಅಭಿಮಾನಿಗಳು.
ಈ ಮೊದಲು ಆಡಿದ ಪಂದ್ಯದಲ್ಲಿ ಉಭಯ ತಂಡಗಳು ಸೋಲನುಭವಿಸಿರುವ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸ್ಥಿತಿಯನ್ನು ತಲುಪಿವೆ.
ಈಕ್ವೆಡಾರ್-ಹೋಂಡುರಾಸ್ (ಗುಂಪು-ಇ) ಪಂದ್ಯ ಆರಂಭ: 03.30
26 ರ್ಯಾಂಕ್ 33
13 ಪಂದ್ಯ 13
03 ಜಯ 0202 ಸೋಲು 0308 ಡ್ರಾ 0814 ಗೋಲು 13
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

