ಫಿಫಾ ವಿಶ್ವಕಪ್ 2014

ಫ್ರಾನ್ಸ್‌ಗೆ ಸ್ವಿಸ್ ಸವಾಲು

ಪಂದ್ಯಾವಳಿಯಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿರುವ ಸ್ವಿಜರ್ಲೆಂಡ್, ಫಿಫಾ ವಿಶ್ವಕಪ್ ಪಂದ್ಯಾವಳಿಯ...

Published On :

ಸಾಲ್ವೆಡಾರ್: ಪಂದ್ಯಾವಳಿಯಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿರುವ ಸ್ವಿಜರ್ಲೆಂಡ್, ಫಿಫಾ ವಿಶ್ವಕಪ್ ಪಂದ್ಯಾವಳಿಯ ಇ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದ್ದು, ಗೆಲವು ದಾಖಲಿಸಲು ಯೋಜನೆ ರೂಪಿಸಿದೆ.
ಶುಕ್ರವಾರ ಸಾಲ್ವೆಡಾರ್‌ನಲ್ಲಿ ನಡೆಯುವ ಕಾದಾಟದಲ್ಲಿ ಗೆಲವು ದಾಖಲಿಸುವ ತಂಡ ಇ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವುದಲ್ಲದೇ, ಅಂತಿಮ 16ರ ಘಟ್ಟದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿವೆ.
ಉಭಯ ತಂಡಗಳು ತಮ್ಮ ಆರಂಭಿಕ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಶುಭಾರಂಭ ಮಾಡಿವೆಯಾದರೂ, ಅದೇ ಲಯವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರಿಸಿಕೊಂಡು ಹೋಗಲು ಎದುರು ನೋಡುತ್ತಿವೆ ಹಾಗಾಗಿ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿ     ಪರಿಣಮಿಸಿದೆ.
ಇಲ್ಲಿಯವರೆಗೂ ಸ್ವಿಜರ್ಲೆಂಡ್ ಹಾಗೂ ಫ್ರಾನ್ಸ್ ತಂಡಗಳು 36 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ 33 ಸೌಹಾರ್ದ ಪಂದ್ಯಗಳಾಗಿದ್ದು, 3 ವಿಶ್ವಕಪ್ ಪಂದ್ಯಗಳಾಗಿವೆ. ಇದರಲ್ಲಿ 2 ಬಾರಿ ವಿಶ್ವಕಪ್ ಅರ್ಹತಾ ಪಂದ್ಯಗಳಾಗಿದ್ದು, ಮತ್ತೊಂದು ಪಂದ್ಯ ವಿಶ್ವಕಪ್‌ನ ಗುಂಪು ಹಂತದ ಪಂದ್ಯವಾಗಿದೆ. ಈ ಮೂರು ಪಂದ್ಯಗಳೂ ಡ್ರಾನಲ್ಲಿ ಅಂತ್ಯಗೊಂಡಿದ್ದು, ಉಭಯ ತಂಡಗಳು ಸಮಬಲದ ಹೋರಾಟ ನೀಡುವ ಸಾಮರ್ಥ್ಯ ಹೊಂದಿವೆ.
ಹಾಗಾಗಿ ಈ ಎರಡು ಸಮತೋಲಿತ ತಂಡಗಳ ಕಾದಾಟ ಅಭಿಮಾನಿಗಳಲ್ಲಿ ರೋಚಕ ಪಂದ್ಯದ ನಿರೀಕ್ಷೆ ಹುಟ್ಟಿಸಿದೆ.
ಸ್ವಿಜರ್ಲೆಂಡ್- ಫ್ರಾನ್ಸ್ (ಗುಂಪು-ಇ) ಪಂದ್ಯ ಆರಂಭ: 12.30
6    ರ್ಯಾಂಕ್    17
36    ಪಂದ್ಯ    36
12    ಜಯ    1515    ಸೋಲು    12
09    ಡ್ರಾ    09
58    ಗೋಲು    62

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.