ಫಿಫಾ ವಿಶ್ವಕಪ್ 2014

ಜಾಣ ಜಪಾನ್‌ಗೆ ಐವರಿ ಆತಂಕ

ಜಾಣ ಜಪಾನ್‌ಗೆ ಐವರಿ ಆತಂಕ
Published On :

ರೆಸಿಫ್ (ಬ್ರೆಜಿಲ್): ತನ್ನ ಗುಣಮಟ್ಟದ ತಾಂತ್ರಿಕ ಶಕ್ತಿಯನ್ನು ಅವಲಂಬಿಸಿರುವ ಏಷ್ಯಾದ ಜಪಾನ್ ಮತ್ತು ಆಫ್ರಿಕಾದ ಬಲಿಷ್ಠ ಐವರಿ ಕೋಸ್ಟ್ ತಂಡಗಳು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಪರಸ್ಪರ ಹೋರಾಟ ನಡೆಸಲಿವೆ. ಆಫ್ರಿಕಾದ ವರ್ಷದ ಆಟಗಾರ ಪ್ರಶಸ್ತಿ ಪಡೆದಿರುವ ಯಾಯಾ ಟೂರ್ ಮತ್ತು ಯುವ ಆಟಗಾರ ಸೆರ್ಜೆ ಆರೀರ್ ಅವರು ಐವರಿ ಕೋಸ್ಟ್‌ಗೆ ನೆರವಾಗಲಿದ್ದಾರೆ. ಹೀಗಾಗಿ ಜಪಾನ್‌ನ ಜಾಣತನ ಮತ್ತು ಐವರಿ ಕೋಸ್ಟ್‌ನ ಆನೆಬಲ ವರೆಗೆ ಹಚ್ಚಿದಂತಾಗಿದೆ.ಕಳೆದ ಎರಡು ವಿಶ್ವಕಪ್‌ನಲ್ಲಿ ಗುಂಪು ಹಂತದಿಂದಲೇ ಹೊರಬಿದ್ದಿರುವ ಕ್ರೋವೇಷಿಯಾ ತಂಡ, ಜಪಾನ್ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸುವುದು ಮುಖ್ಯವೆಂದು ನಾಯಕ ಡಿಡಿಯರ್ ಡ್ರೋಗ್ಬಾ ಅವರು ನಂಬಿಕೊಂಡಿದ್ದಾರೆ.ಇದುವರೆಗೂ ಉಭಯ ತಂಡಗಳು ಒಟ್ಟು ಮೂರು ಪಂದ್ಯಗಳನ್ನಾಡಿವೆ. ಇದರಲ್ಲಿ ಜಪಾನ್ ಎರಡು ಬಾರಿ ಗೆದ್ದರೆ, ಐವರಿ ಕೋಸ್ಟ್ ಒಂದು ಬಾರಿ ಮಾತ್ರ ಗೆದ್ದಿದೆ.
ಐವರಿ ಕೋಸ್ಟ್ ಶಕ್ತಿ: ಕೋಚ್: ಸಬ್ರಿ ಲ್ಯಾಮೌಚಿ
ಗೋಲ್‌ಕೀಪರ್: ಬೌಬಕಾರ್ ಬೆರಿ, ಶಿವೈನ್ ಬೊಹಾವೊ, ಸಾಯೋಬಾ ಮಂಡೆ
ರಕ್ಷಣಾ ವಿಭಾಗ: ಜೀನ್ ಡೇನಿಯಲ್ ಅಕ್ಬಾ ಅಕ್ಪ್ರೋ, ಸೆರ್ಜಿ ಆರೀರ್, ಸುಲೇಮಾನ್ ಬಂಬಾ.
ಮಿಡ್‌ಫೀಲ್ಡರ್‌ಗಳು: ಜಿಯೋಫ್ರಾಯ್ ಸೆರೆ ಡಿ, ಇಸ್ಮಾಯಿಲ್ ಡೈಮಂಡೆ.
ಮುನ್ನಡೆ ಆಟಗಾರರು: ಮ್ಯಾಥೀಸ್ ಬೊಲಿ, ವಿಲ್ಫ್ರೈಡ್ ಬೋನಿ. ಡಿಡೀಯರ್ ಡ್ರೋಗ್ಬಾ. ಜಪಾನ್ ಶಕ್ತಿ:  
ಕೋಚ್: ಅಲ್ಬರ್ಟೋ ಜಚ್ಚಿರೋನಿ
ಗೋಲ್‌ಕೀಪರ್‌ಗಳು: ಎಜ್ಜಿ ಕವಾಶಿಮಾ, ಶುಸಾಕು ನಿಶಿಕಾವಾ, ಶುಚಿ ಗೊಂಡಾ
ರಕ್ಷಣಾ ವಿಭಾಗ: ಮಸಾಹಿಕೊ ಇನೋಹಾ, ಯಸುಯಕಿ ಕೊನ್ನೊ
ಮುನ್ನಡೆ ಆಟಗಾರರು: ಕೀಸುಕೆ ಹೊಂಡಾ, ಯೋಶಿತೋ ಓಕೊಬೊ.

ಮುಖಾಮುಖಿ
ತಂಡ          ಪಂದ್ಯ   ಜಯ   ಡ್ರಾ    ಸೋಲು   ಗೋಲುಪರ  ಗೋಲು ವಿರುದ್ಧ
ಐವರಿ ಕೋಸ್ಟ್ 3         1      0      2            2               2
ಜಪಾನ್       3         2      0       1           2               2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.