ನನ್ನ ಗೆಲುವನ್ನು ಸಂಭ್ರಮಿಸಲ್ಲ, ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹಾಸನವನ್ನು ದೇವೇಗೌಡರಿಗೆ ಬಿಟ್ಟುಕೊಡಲು ಸಿದ್ದ: ಪ್ರಜ್ವಲ್
ಮೊಮ್ಮಗ ಮೇಲಿನ ಮಮಕಾರದಿಂದಾಗಿ ತಮ್ಮ ಭದ್ರಕೋಟೆ ಹಾಸನ ಕ್ಷೇತ್ರವನ್ನು ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟ ತುಮಕೂರಿನಲ್ಲಿ ನಿಂತು ಸೋತಿದ್ದರು. ಇದೀಗ ತಾತನ ಸೋಲಿನಿಂದ ಬೇಸರಗೊಂಡಿರುವ...

Published On :
ಹಾಸನ: ಮೊಮ್ಮಗ ಮೇಲಿನ ಮಮಕಾರದಿಂದಾಗಿ ತಮ್ಮ ಭದ್ರಕೋಟೆ ಹಾಸನ ಕ್ಷೇತ್ರವನ್ನು ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟ ತುಮಕೂರಿನಲ್ಲಿ ನಿಂತು ಸೋತಿದ್ದರು. ಇದೀಗ ತಾತನ ಸೋಲಿನಿಂದ ಬೇಸರಗೊಂಡಿರುವ ಪ್ರಜ್ವಲ್ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲು ತೀರ್ಮಾನಿಸಿದ್ದೇನೆ ಎಂದರು.
ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು, ನನ್ನ ಗೆಲುವನ್ನು ಸಂಭ್ರಮಿಸಬೇಡಿ. ಹಾಸನದಿಂದ ಮತ್ತೆ ದೇವೇಗೌಡರನ್ನು ನಿಲ್ಲಿಸಿ, ಅವರನ್ನು ಗೆಲ್ಲಿಸಿ ಸಂಭ್ರಮಿಸೋಣ ಎಂದು ಹೇಳಿದ್ದಾರೆ.
ನಾನು ಇದನ್ನು ಪ್ರೀತಿಯಿಂದ ಹೇಳುತ್ತಿದ್ದೇನೆ. ಅವರು ಇದನ್ನು ಸ್ವೀಕರಿಸಬೇಕು. ದೇವೇಗೌಡರನ್ನು ಇಲ್ಲಿಂದ ಗೆಲ್ಲಿಸಿ ನಂತರ ವಿಜಯೋತ್ಸವ ಮಾಡ್ತೀನಿ ಎಂದು ಹೇಳುತ್ತೇನೆ.
ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರು ಎ. ಮಂಜು ವಿರುದ್ಧ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PoliticsರಾಜಕೀಯHD Devegowdaಹಾಸನಲೋಕಸಭೆ ಚುನಾವಣೆHassanLok Sabha pollsಹೆಚ್ ಡಿ ದೇವೇಗೌಡPrajwal Revannaಪ್ರಜ್ವಲ್ ರೇವಣ್ಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


