ನನ್ನ ನೋವು ಯಾರಿಗೆ ತೋರಿಸಲಿ: ಸಿಎಂ ಹೇಳಿಕೆ ನೆನೆದು ಗದ್ಗದಿತರಾದ ಸುಮಲತಾ ಅಂಬರೀಷ್
ನನ್ನ ನೋವು ಯಾರಿಗೆ ತೋರಿಸಿಕೊಳ್ಳಲಿ, ಅವರು ನನ್ನ ಮುಖದಲ್ಲಿ ನೋವು ನೋಡಲು ಬಯಸುತ್ತಾರೆ, ನಾನು ನೋವಿನಲ್ಲಿರುವುದನ್ನು ನೋಡಲು ನೀವು ಇಷ್ಟ ...

Published On :
ಮಂಡ್ಯ: ನನ್ನ ನೋವು ಯಾರಿಗೆ ತೋರಿಸಿಕೊಳ್ಳಲಿ, ಅವರು ನನ್ನ ಮುಖದಲ್ಲಿ ನೋವು ನೋಡಲು ಬಯಸುತ್ತಾರೆ, ನಾನು ನೋವಿನಲ್ಲಿರುವುದನ್ನು ನೋಡಲು ನೀವು ಇಷ್ಟ ಪಡುತ್ತೀರಾ ಇದು ಮಂಡ್ಯ ಪಕ್ಷೇತರ ಅಭ್ಯರ್ತಿ ಸುಮಲತಾ ಜನತೆಗೆ ಕೇಳಿದ ಪ್ರಶ್ನೆ.
ಮಂಡ್ಯ ಜಿಲ್ಲೆ ಕೀಲಾರ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಸುಮಲತಾ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ನೆನೆದು ಗದ್ಗದಿತರಾದರು, ನನ್ನ ಮುಖದಲ್ಲಿ ನೋವಿಲ್ಲ ಎಂದು ಸಿಎಂ ಹೇಳಿದ್ದಾರೆ, ಇದರ ಅರ್ಥವೇನು, ನಾನು ನೋವಿನಲ್ಲಿರುವುದು ಅವರಿಗೆ ಇಷ್ಟವೇ? ನಾನು ಯಾರ ಬಳಿ ನೋವು ತೋರಿಸಿಕೊಳ್ಳಲಿ ಎಂದು ಪ್ರಶ್ನಿಸಿದ್ದಾರೆ.
ನಾನು ಅಳುವುದಿಲ್ಲ ಎಂದು ಕಾರ್ಯಕರ್ತರಿಗೆ ಹಾಗೂ ಮಂಡ್ಯ ಜನತೆಗೆ ಮಾತುಕೊಟ್ಟಿದ್ದೇನೆ, ಹೀಗಾಗಿ ನಾನು ಅಳುವುದಿಲ್ಲ, ಸಿಎಂ ಅವರ ಮನೆಯಲ್ಲಿ ಹೆಣ್ಣು ಮಕ್ಕಳಿಲ್ಲವೇ ಎಂದು ಪ್ರಶ್ನಿಸಿದ್ದಾರೆ,.
ಇನ್ನೂ ಇದೇ ವೇಳೆ ನಾಳೆ ಸುದ್ದಿಗೋಷ್ಠಿ ನಡೆಸಿ ತಮ್ಮ ಅಧಿಕೃತ ಚಿಹ್ನೆಯ ಬಗ್ಗೆ ಪ್ರಕಟಿಸುವುದಾಗಿ ಹೇಳಿದ್ದಾರೆ, ಜೊತೆಗೆ ಜಿಲ್ಲಾಧಿಕಾರಿ ತಮಗೆ ನೀಡಿರುವ ನೋಟಿಸ್ ಬಗ್ಗೆಯೂ ಉತ್ತರಿಸುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Politicsರಾಜಕೀಯಎಚ್.ಡಿ ಕುಮಾರಸ್ವಾಮಿHD Kumaraswamyಮಂಡ್ಯMandyaEmotionalSumalatha Ambareeshಸುಮಲತಾ ಅಂಬರೀಷ್ಭಾವುಕತೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


