ಕರ್ನಾಟಕ

ಮಂಡ್ಯ ರಣಕಣ: ಸುಮಲತಾ ಅಂಬರೀಶ್‌ಗೆ ಸಂಕಷ್ಟ, ಡಿಸಿ ನೋಟಿಸ್

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪ್ರಭಾವ ಬಳಸಿ ನಿಖಿಲ್ ಕುಮಾರ್ ನಾಮಪತ್ರದಲ್ಲಿನ ತಪ್ಪನ್ನು ಮುಚ್ಚಿಡೋಕೆ ಯತ್ನಿಸಿದ್ದಾರೆ ಎಂದು ಪಕ್ಷೇತರ ಸುಮಲತಾ ಆರೋಪಿಸಿದ್ದು...

ಮಂಡ್ಯ ರಣಕಣ: ಸುಮಲತಾ ಅಂಬರೀಶ್‌ಗೆ ಸಂಕಷ್ಟ, ಡಿಸಿ ನೋಟಿಸ್
ಸುಮಲತಾ ಅಂಬರೀಶ್
Published On :
ಮಂಡ್ಯ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪ್ರಭಾವ ಬಳಸಿ ನಿಖಿಲ್ ಕುಮಾರ್ ನಾಮಪತ್ರದಲ್ಲಿನ ತಪ್ಪನ್ನು ಮುಚ್ಚಿಡೋಕೆ ಯತ್ನಿಸಿದ್ದಾರೆ ಎಂದು ಪಕ್ಷೇತರ ಸುಮಲತಾ ಆರೋಪಿಸಿದ್ದು ಈ ಸಂಬಂಧ ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.
ಸುಮಲತಾ ಅಂಬರೀಶ್ ಅವರು ಜಿಲ್ಲಾಡಳಿತ ಮೇಲೆ ಅಪನಂಬಿಕೆ ಬರುವಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಕಾರಣಕ್ಕೆ ನೋಟಿಸ್ ನೀಡಲಾಗಿದೆ. ಐಪಿಸಿ ಸೆಕ್ಷನ್ 189ರಡಿ ನೋಟಿಸ್ ಜಾರಿ ಮಾಡಿದ ಡಿಸಿ ಮಂಜುಶ್ರೀ ಒಂದು ದಿನದೊಳಗೆ ಸಮಜಾಯಿಷಿ ಕೊಡದಿದ್ದರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಿಖಿಲ್ ನಾಮಪತ್ರದಲ್ಲಿ ತಪ್ಪುಗಳಿವೆ. ಈ ತಪ್ಪುಗಳನ್ನು ಮುಚ್ಚಿಡೋಕೆ ಯತ್ನಿಸಲಾಗಿದೆ. ಅಲ್ಲದೆ ಸಿಎಂ ಡಿಸಿಯವರು ಮನೆಗೆ ಕರೆಸಿಕೊಂಡು ಮಾತನಾಡಿದ್ದಾರೆಂಬ ಮಾಹಿತಿ ನನಗೆ ಸಿಕ್ಕಿದೆ. ಇಟ್ ಇಸ್ ಟೋಟಲ್ ಬ್ರೇಕಿಂಗ್ ಆಫ್ ಲಾ, ಇದು ಎಲ್ಲು ನಡೆಯಲ್ಲ ಎಂಬ ಸುಮಲತಾ ಹೇಳಿಕೆ ಆಧಾರದ ಮೇಲೆ ಈ ನೋಟಿಸ್ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.