ಕರ್ನಾಟಕ

ದೇವೇಗೌಡರ ಕ್ಷೇತ್ರ ಆಯ್ಕೆ ಕೊನೆಗೂ ನಿರ್ಧಾರ; ತುಮಕೂರಿನಿಂದ ಸ್ಪರ್ಧೆ?

ಕೊನೆಗೂ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ದಶಕಗಳ ಕಾಲ ಹಾಸನ ಜೊತೆ ರಾಜಕೀಯವಾಗಿ...

ದೇವೇಗೌಡರ ಕ್ಷೇತ್ರ ಆಯ್ಕೆ ಕೊನೆಗೂ ನಿರ್ಧಾರ; ತುಮಕೂರಿನಿಂದ ಸ್ಪರ್ಧೆ?
ಹೆಚ್ ಡಿ ದೇವೇಗೌಡ
Published On :
ಹಾಸನ: ಕೊನೆಗೂ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ದಶಕಗಳ ಕಾಲ ಹಾಸನ ಜೊತೆ ರಾಜಕೀಯವಾಗಿ ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದ ದೇವೇಗೌಡರು ಈ ಬಾರಿ ಮೊಮ್ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ನಂತರ ದೇವೇಗೌಡರು ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಬೆಂಗಳೂರು ಉತ್ತರವೇ ಅಥವಾ ತುಮಕೂರು ಕ್ಷೇತ್ರವೇ ಎಂಬ ಗೊಂದಲ ಇಷ್ಟು ದಿನ ಇದ್ದಿತ್ತು. ಅದೀಗ ಕೊನೆಗೊಳ್ಳುವ ಹಂತಕ್ಕೆ ಬಂದು ನಿಂತಿದೆ ಎಂದು ಕಾಣುತ್ತದೆ.
ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆ ಈ ವಿಷಯ ತಿಳಿಸಿದ್ದು ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುತ್ತಿದ್ದು ಇಂದು ಖಚಿತವಾಗಿ ಘೋಷಿಸಲಿದ್ದಾರೆ ಎಂದಿದ್ದರು. ಆದರೆ ಬೆಂಗಳೂರು ಉತ್ತರ ಭಾಗದ ಜೆಡಿಎಸ್ ನಾಯಕರು ಕಾರ್ಯಕರ್ತರು ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸುವಂತೆ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ನಿನ್ನೆ ಹಾಸನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ ತಮ್ಮ ಕುಟುಂಬದವರ ವಿರುದ್ಧ ಆರೋಪಿಸುವ ಮತ್ತು ಮಾತನಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಜನತೆಯ ವಿರುದ್ಧವಾಗಿ ನಮ್ಮ ಕುಟುಂಬ ಏನು ಮಾಡಿದೆ ಎಂದು ಕೇಳಿದ್ದಾರೆ.
ದೇವೇಗೌಡರ ಇಬ್ಬರು ಮೊಮ್ಮಕ್ಕಳನ್ನು ಈ ಬಾರಿಯ ಚುನಾವಣೆಯಲ್ಲಿ ಅಧಿಕಾರ ಮತ್ತು ಆಸ್ತಿಗಳ ರಕ್ಷಣೆಗಾಗಿ ಕಣಕ್ಕಿಳಿಸಲಿಲ್ಲ. ಬದಲಿಗೆ ಎರಡೂ ಕ್ಷೇತ್ರಗಳ ಜನತೆ ಯುವಕರು ಚುನಾವಣಾ ಸ್ಪರ್ಧೆಗಿಳಿಯುವುದನ್ನು ಬಯಸಿದ್ದರು. ನಾವು ಅವರಿಬ್ಬರನ್ನೂ ಮೊದಲೇ ರಾಜಕೀಯಕ್ಕೆ ಕರೆತರಬೇಕಾಗಿತ್ತು ಎಂದರು.
ರಾಜ್ಯದ ಜನತೆ ನರೇಂದ್ರ ಮೋದಿಯವರು ಈ ದೇಶಕ್ಕೆ ಮತ್ತು ಕರ್ನಾಟಕ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು.ಜಾತಿ ಮತ್ತು ಧರ್ಮ ಆಧಾರಿತ ರಾಜಕಾರಣದಲ್ಲಿ ತೊಡಗುವ ರಾಜಕೀಯ ನಾಯಕರಿಗೆ ಪ್ರೋತ್ಸಾಹ ನೀಡಬಾರದು ಎಂದು ಸಿಎಂ ಮನವಿ ಮಾಡಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.