ಬಿಜೆಪಿ ಭದ್ರಕೋಟೆ ಶಿವಮೊಗ್ಗ, ಅಭಿವೃದ್ಧಿಯೊಂದೇ ನಮ್ಮ ಗೆಲುವಿನ ಮಂತ್ರ: ರಾಘವೇಂದ್ರ
ನನ್ನ ತಂದೆ ಸಂಸದ ಹಾಗೂ ಸಿಎಂ ಆಗಿದ್ದಾಗ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ,ಕಳೆದ ಆರು ತಿಂಗಳಲ್ಲಿ ನಾನನು ಶಿವಮೊಗ್ಗಕ್ಕಾಗಿ ಹಲವು ಯೋಜನೆಗಳನ್ನು ...

Published On :
ಶಿವಮೊಗ್ಗ: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಮುಗಿದಿದ್ದು, ಶಿವಮೊಗ್ಗ ಸೇರಿ 14 ಕ್ಷೇತ್ರಗಳ ಮತದಾನ ಏಪ್ರಿಲ್ 23 ರಂದು ನಡೆಯಲಿದೆ ಇದೇ ವೇಳೆ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಬಿ.ವೈ ರಾಘವೇಂದ್ರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ಪ್ರ: ನಿಮ್ಮ ಗೆಲುವಿಗೆ ಕಾರಣವಾಗಿರುವ ಅಂಶಗಳೇನು?
ನನ್ನ ತಂದೆ ಸಂಸದ ಹಾಗೂ ಸಿಎಂ ಆಗಿದ್ದಾಗ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ,ಕಳೆದ ಆರು ತಿಂಗಳಲ್ಲಿ ನಾನನು ಶಿವಮೊಗ್ಗಕ್ಕಾಗಿ ಹಲವು ಯೋಜನೆಗಳನ್ನು ತಂದಿದ್ದೇನೆ, ಜನಶತಾಬ್ದಿ ಎಕ್ಸ್ ಪ್ರೆಸ್ ಮತ್ತು ಬೈಂದೂರು ಮೀನುಗಾರಿಕೆ ಯೋಜನೆ ಜಾರಿಗೆ ತಂದಿದ್ದೇವೆ, ಮೋದಿ ಅವರ ಜನಪ್ರಿಯತೆ ಹಾಗೂ ಬಿಜೆಪಿಯ ಉತ್ತಮ ಆಡಳಿತದಿಂದಾಗಿ ಈ ಚುನಾವಣೆಯಲ್ಲಿ ನಮ್ಮ ಗೆಲುವು ಖಚಿತ.
ಪ್ರ: ಕಸ್ತೂರಿ ರಂಗನ್ ವರದಿ ಅನುಷ್ಠಾನ ಮತ್ತು ಬಗರ್ ಹುಕುಂ ಸಮಸ್ಯೆದೆ ಹೇಗೆ ಪರಿಹಾರ ಕಂಡುಹಿಡಿಯುವಿರಿ?
ಕಸ್ತೂರಿ ರಂಗನ್ ವರದಿ ಅನುಷ್ಠಾನ ಮತ್ತು ರೈತರ ಬಗರ್ರ್ ಹುಕುಂ ಯೋಜನೆಗಳ ಸಂಬಂಧ ವಿರೋಧ ಪಕ್ಷ ಬ್ಲೇಮ್ ಗೇಮ್ ಮುಂದುವರಿದಿದೆ, ಬಂಗಾರಪ್ಪ ಅವರ ಆಡಳಿತವಧಿಯಲ್ಲಿ ಬಗರ್ ಹುಕುಂ ಸಮಸ್ಯೆ ಆರಂಭವಾಯಿತು. ಸಮಸ್ಯೆಗಳನ್ನು ಬಗೆಹರಿಸುವ ಬದಲು ನಮ್ಮನ್ನು ಬೈಯ್ದುಕೊಂಡು ತಿರುಗಾಡುತ್ತಿದ್ದಾರೆ.
ಶಿಕಾರಿಪುರ, ಸಾಗರ ಮತ್ತು ಸೊರಬದಲ್ಲಿ ಸಣ್ಣ ನೀರಾವರಿ ಯೋಜನೆಗಳನ್ನು ತರುವಲ್ಲಿ ನಮ್ಮ ತಂದೆ ಪ್ರಮುಖ ಪಾತ್ರ ವಹಿಸಿದ್ದಾರೆ, ನಮ್ಮ ವಿರುದ್ಧದ ಆರೋಪಗಳೆಲ್ಲವೂ ಚುನಾವಣಾ ಗಿಮಿಕ್ ಆಗಿದೆ.
ಪ್ರ: ಜನ ನಿಮಗೆ ಏಕೆ ಮತಹಾಕಬೇಕು ?
ಬಲಿಷ್ಠ ರಾಷ್ಟ್ರ ಹಾಗೂ ಶಿವಮೊಗ್ಗದ ಅಭಿವೃದ್ಧಿಗಾಗಿ ಜನ ನಮಗೆ ಮತ ಹಾಕಬೇಕಾಗಿದೆ, ವಿಎಸ್ ಐಎಲ್ ಪುನರುಜ್ಜೀವನಕ್ಕಾಗಿ ಎಲ್ಲಾರೀತಿಯ ಪ್ರಯತ್ನ ಮಾಡುತ್ತಿದ್ದೇನೆ, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ 150 ಕೋಟಿ ರು ಅನುದಾನ ನೀಡಿದ್ದರು. ಆದರೆ ನಂತರ ಬಂದ ಸರ್ಕಾರ ಅದನ್ನು ರಕ್ಷಿಸುವಲ್ಲಿ ವಿಫಲವಾಗಿದ್ದೇವೆ, ಕೇಂದ್ರದಲ್ಲಿ ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ, ಮೋದಿ ಸರ್ಕಾರದ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


