ಮೈಸೂರು ಏರ್ ಪೋರ್ಟ್ ನಿಂದ ಸಿಂಗಾಪುರಕ್ಕೆ ಹೋಗುತ್ತೇನೆ: ಅಭಿಷೇಕ್ ಟಾಂಗ್
ಏಪ್ರಿಲ್ 19ರ ನಂತರ ಮಂಡ್ಯದಲ್ಲಿರುವ ಟೂರಿಂಗ್ ಟಾಕೀಸ್ ಪ್ಯಾಕಪ್ ಆಗುತ್ತದೆ ಎಂದು ಟೀಕಿಸಿದವರಿಗೆ ಅಭಿಷೇಕ್ ಅಂಬರೀಷ್ ಟಾಂಗ್ ನೀಡಿದ್ದಾರೆ. ಚುನಾವಣೆ ಆದ .,..

Published On :
ಮಂಡ್ಯ: ಏಪ್ರಿಲ್ 19ರ ನಂತರ ಮಂಡ್ಯದಲ್ಲಿರುವ ಟೂರಿಂಗ್ ಟಾಕೀಸ್ ಪ್ಯಾಕಪ್ ಆಗುತ್ತದೆ ಎಂದು ಟೀಕಿಸಿದವರಿಗೆ ಅಭಿಷೇಕ್ ಅಂಬರೀಷ್ ಟಾಂಗ್ ನೀಡಿದ್ದಾರೆ. ಚುನಾವಣೆ ಆದ ನಂತರ ಸುಮಲತಾ ಮತ್ತು ಅಭಿ ಇಬ್ಬರೂ ಸಿಂಗಾಪುರಕ್ಕೆ ಹೋಗುತ್ತಾರೆ. ಇದಕ್ಕಾಗಿ ಟಿಕೆಟ್ ಕೂಡ ಬುಕ್ ಆಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಆರೋಪಗಳಿಗೆ ಖುದ್ದು ಅಭಿಷೇಕ್ ಅಂಬರೀಷ್ ಟಾಂಗ್ ನೀಡಿದ್ದಾರೆ. ಮತದಾನ ಮಾಡಿದ ಮಾರನೆಯ ದಿನ ಅಂದರೆ ಶುಕ್ರವಾರ ಮಂಡ್ಯದಲ್ಲಿ ತಿರುಗಾಡಿದ್ದಾರೆ.
ನಾನು ಈ ಟೀ ಅಂಗಡಿಯವರಿಗೆ ಮಾತು ಕೊಟ್ಟಿದ್ದೆ. ಚುನಾವಣೆ ಮುಗಿದ ಬಳಿಕ ಬರುವುದಾಗಿ ಹೇಳಿದ್ದೆ. ಅದರಂತೆ ನಾನು ಇಂದು ಇಲ್ಲಿಗೆ ಬಂದು ಟೀ ಕುಡಿದು ಹೋಗ್ತಿದ್ದೇನೆ. ಅದೇ ಸಮಯಕ್ಕೆ ಸರಿಯಾಗಿ ಯಾರೋ ಸೋಷಿಯಲ್ ಮೀಡಿಯಾದಲ್ಲಿ ನಾನು, ಅಮ್ಮ ಸಿಂಗಾಪುರಕ್ಕೆ ಹೋಗುವ ಸುಳ್ಳು ಸುದ್ದಿ ಹಬ್ಬಿಸಿದ್ರು. ಇವತ್ತು ನಾನು ನಿಮ್ಮ ಮುಂದೆ ಇದ್ದೇನೆ. ಯಾರು ಈ ಸುದ್ದಿ ಹಬ್ಬಿಸಿದ್ರೋ ಅವ್ರಿಗೆ ತಲುಪುತ್ತೆ ಬಿಡಿ ಎಂದರು.
ಅವರಿಗೆ ಇಲ್ಲಿಗೆ ಬರಲು ಹೇಳಿ. ನಾನು ಇಲ್ಲಿಯೇ ಇದ್ದು ಅವರೊಂದಿಗೆ ಹರಟೆ ಹೊಡೆದು ಹೊರಡುತ್ತೇನೆ ಎಂದು ಅಭಿಷೇಕ್ ಅಂಬರೀಷ್ ತಿಳಿಸಿದರು. ನಾನು ಇಲ್ಲಿಂದ ಮೈಸೂರು ಏರ್ ಪೋರ್ಟ್ ಗೆ ತೆರಳಿ ಅಲ್ಲಿಂದ ಸಿಂಗಾಪುರಕ್ಕೆ ಹಾರುತ್ತೇನೆ ಎಂದು ವ್ಯಂಗ್ಯ ವಾಡಿದರು.
ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಿದೆ. ಹಾಗಾಗಿ ನಮ್ಮ ಅಮ್ಮ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಯಾರು ಕೂಡ ಬೆಟ್ಟಿಂಗ್ ಕಟ್ಟಿ ಹಣ ಹಾಳು ಮಾಡಿಕೊಳ್ಳಬೇಡಿ ಎಂದು ಅಭಿ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Politicsರಾಜಕೀಯಮಂಡ್ಯMandyaಲೋಕಸಭೆ ಚುನಾವಣೆAbhishek GowdaLok Sabha electionಸುಮಲತಾ ಅಂಬರೀಷ್Sumalatha Ambhareesh
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


