ಕರ್ನಾಟಕ

ಮಹಿಳೆ ಆಯ್ತು, ಇದೀಗ ವೇದಿಕೆ ಮೇಲೆ ಮಾಜಿ ಸಿಎಂ ಸಿದ್ದುಗೆ ಕಿಸ್ ಕೊಟ್ಟ ಅಭಿಮಾನಿ, ವಿಡಿಯೋ ವೈರಲ್!

ಕಲಬುರಗಿ ಲೋಕಸಭಾ ಕ್ಷೇತ್ರದ ಜೇವರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಚುನಾವಣೆ ಪ್ರಚಾರದಲ್ಲಿದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಿಮಾನಿಯೊಬ್ಬ ಚುಂಬಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಮಹಿಳೆ ಆಯ್ತು, ಇದೀಗ ವೇದಿಕೆ ಮೇಲೆ ಮಾಜಿ ಸಿಎಂ ಸಿದ್ದುಗೆ ಕಿಸ್ ಕೊಟ್ಟ ಅಭಿಮಾನಿ, ವಿಡಿಯೋ ವೈರಲ್!
ಸಿದ್ದರಾಮಯ್ಯ
Published On :
ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಜೇವರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಚುನಾವಣೆ ಪ್ರಚಾರದಲ್ಲಿದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಿಮಾನಿಯೊಬ್ಬ ಚುಂಬಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
ಜೇವರ್ಗಿ ಪ್ರಚಾರ ಸಭೆಯಲ್ಲಿನ ಈ 'ಚುಂಬನ ಸುರಿಮಳೆ'ಯ ವಿಡಿಯೋ ಇದೀಗ ವೈರಲ್ ಆಗಿದೆ. ಕಲಬುರಗಿಯಲ್ಲಿ ಇಡೀ ದಿನ ಹೆಲಿಕಾಪ್ಟರ್ ಹಾರಾಟದಲ್ಲಿದ್ದ ಸಿದ್ದರಾಮಯ್ಯ ಜೇವರ್ಗಿಯಲ್ಲಿ ವೇದಿಕೆ ಹತ್ತಿ ಇನ್ನೇನು ಆಸೀನರಾಗಬೇಕು ಎನ್ನುವಷ್ಟರಲ್ಲಿಯೇ ಅಭಿಮಾನಿಯೋರ್ವ ಅವರ ಕೈ ಹಿಡಿದು, ಅವರ ಅಂಗ ರಕ್ಷಕನ ತರಹ ಸುತ್ತಮುತ್ತಲೇ ಓಡಾಡಿಕೊಂಡಿದ್ದ.
ವೇದಿಕೆಯಲ್ಲಿ ತುಂಬ ಜನದಟ್ಟಣೆ, ಎಲ್ಲರು ಸಿದ್ದರಾಮಯ್ಯನವರಿಗೆ ಸನ್ಮಾನ ಮಾಡಲು ಬರಬೇಕಾದರೆ ಹಾಗೆ ಬರುವವರನ್ನೆಲ್ಲ ದೂರ ಸರಿಸಿ ವೇದಿಕೆಯಲ್ಲಿ ಸಿದ್ದರಾಮಯ್ಯನವರ  ಅಕ್ಕ ಪಕ್ಕದಲ್ಲೇ ಓಡಾಡಿಕೊಂಡಿದ್ದ. ನಂತರ ವೇದಿಕೆ ಮೇವೆ ಏಕಾಏಕಿ ಸಿದ್ದರಾಮಯ್ಯ ಅವರ ಕೆನ್ನೆ ಚುಂಬಿಸಿದ.
ಕಾರ್ಯಕ್ರಮದ ಆರಂಭದಲ್ಲೇ ನಡೆದ ಚುಂಬನ ಸುರಿಮಳೆಗೆ ವೇದಿಕೆಯಲ್ಲಿದ್ದವರೆಲ್ಲರೂ ಗಾಬರಿ, ಏನು ನಡೆಯುತ್ತಿದೆ ಎಂದು ಅರಿಯುವ ಮೊದಲೇ ಕ್ಷಮಾರ್ಧದಲ್ಲಿ ಅಭಿಮಾನಿ ಚುಂಬನ ನೀಡಿ ಬಿಟ್ಟಿದ್ದ. ಇದರಿಂದ ತುಸು ಕೋಪಗೊಂಡಂತೆ ಕಂಡುಬಂದ ಸಿದ್ದರಾಮಯ್ಯ ತಕ್ಷಣ ಆತನನ್ನು ದೂರ ಸರಿಸಿ ಕೋಪದಲ್ಲಿ ದುರುಗುಟ್ಟಿ ನೋಡಿದರು. ಅಷ್ಟರಲ್ಲಾಗಲೇ ಆತ ಸಿದ್ದರಾಮಯ್ಯನವರಿಂದ ಬಲು ದೂರ ಸರಿದುಬಿಟ್ಟಿದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.