ಕರ್ನಾಟಕ

ಮಂಡ್ಯದಲ್ಲಿನ ಬಂಡಾಯದಿಂದ ಮೈತ್ರಿ ಸರ್ಕಾರದ ಅಸ್ಥಿತ್ವಕ್ಕೆ ಧಕ್ಕೆ ಇಲ್ಲ: ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ನ ಬಿಕ್ಕಟ್ಟು ಶಮನ ನಿವಾರಣೆ ವ್ಯಕ್ತಿ ಎಂದು ಡಿ ಕೆ ಶಿವಕುಮಾರ್ ಅವರನ್ನು ಕರೆಯುತ್ತಿದ್ದು ರಾಜ್ಯದ...

ಮಂಡ್ಯದಲ್ಲಿನ ಬಂಡಾಯದಿಂದ ಮೈತ್ರಿ ಸರ್ಕಾರದ ಅಸ್ಥಿತ್ವಕ್ಕೆ ಧಕ್ಕೆ ಇಲ್ಲ: ಡಿ.ಕೆ. ಶಿವಕುಮಾರ್
ಡಿ ಕೆ ಶಿವಕುಮಾರ್
Published On :
ಕಾಂಗ್ರೆಸ್ ನ ಬಿಕ್ಕಟ್ಟು ಶಮನ ನಿವಾರಣೆ ವ್ಯಕ್ತಿ ಎಂದು ಡಿ ಕೆ ಶಿವಕುಮಾರ್ ಅವರನ್ನು ಕರೆಯುತ್ತಿದ್ದು ರಾಜ್ಯದ ಒಕ್ಕಲಿಗ ಸಮುದಾಯದ ಪ್ರತಿನಿಧಿಯಾಗಿದ್ದರೂ ಕೂಡ ಈ ಚುನಾವಣೆ ಸಂದರ್ಭದಲ್ಲಿ ಮಾತ್ರ ಸೀಮಿತ ಕ್ಷೇತ್ರಗಳಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ ಎನ್ನಬಹುದು.
ಈ ಸಂದರ್ಭದಲ್ಲಿ ಚುನಾವಣೆ, ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ, ದೇಶದ ರಾಜಕೀಯ ಮತ್ತು ಟೀಕೆಗಳು, ಎಂ ಬಿ ಪಾಟೀಲ್ ರಂಥಹ ಪಕ್ಷದ ಸಹೋದ್ಯೋಗಿಗಳ ಬಗ್ಗೆ ಮಾತನಾಡಿದ್ದಾರೆ.
ಈ ಚುನಾವಣೆಯಲ್ಲಿ ಡಿ ಕೆ ಶಿವಕುಮಾರ್ ಹಿಂದೆ ಉಳಿದಿದ್ದಾರೆ ಏಕೆ? ಕಾಂಗ್ರೆಸ್ ನ ಟ್ರಬಲ್ ಶೂಟರ್ ಗೆ ಏನಾಗಿದೆ?
-2018ರ ವಿಧಾನಸಭೆ ಚುನಾವಣೆಯಲ್ಲಿ ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೆ ಮತ್ತು ನನಗೆ ಬಹಳ ಜವಾಬ್ದಾರಿಗಳಿದ್ದವು. ಈಗ ಹೆಚ್ ಕೆ ಪಾಟೀಲ್ ಅವರು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯನವರು ಸಿಎಲ್ ಪಿ ನಾಯಕರು, ಪರಮೇಶ್ವರ್ ಉಪ ಮುಖ್ಯಮಂತ್ರಿ, ದಿನೇಶ್ ಗುಂಡೂರಾವ್ ಕೆಪಿಸಿಸಿ ಮುಖ್ಯಸ್ಥರು. ನನಗಿಲ್ಲಿ ಸಣ್ಣ ಜವಾಬ್ದಾರಿಯಿದೆಯಷ್ಟೆ. ನಾನು ಸ್ಟಾರ್ ಪ್ರಚಾರಕನಾಗಿದ್ದು ಪಕ್ಷಕ್ಕೆ ಅಗತ್ಯವಿರುವಲ್ಲಿಗೆ ಪ್ರಚಾರ ಮಾಡಲು ಹೋಗುತ್ತೇನೆ. ಬಳ್ಳಾರಿ ಉಸ್ತುವಾರಿ ಸಚಿವನಾಗಿ ಅಲ್ಲಿಗೆ ಉತ್ತಮ ಕೆಲಸಗಳನ್ನು ಮಾಡಿದ್ದೇನೆ. ಅದು ನನ್ನ ಕ್ಷೇತ್ರವಾಗಿಲ್ಲದಿದ್ದರೂ ಕೂಡ ಇಡೀ ರಾಜ್ಯ ನನ್ನದೆಂದು ಭಾವಿಸಿ ಕೆಲಸ ಮಾಡುತ್ತೇನೆ. ನನ್ನನ್ನು ಟ್ರಬಲ್ ಶೂಟರ್ ಎಂದು ಏಕೆ ಕರೆಯುತ್ತಾರೆಂದು ಗೊತ್ತಿಲ್ಲ, ಆದರೆ ಎಲ್ಲೆಲ್ಲಿ ಸಮಸ್ಯೆಗಳಿದೆ ಅಲ್ಲಿ ನಾನಿರುತ್ತೇನೆ.
-ಮಂಡ್ಯದಲ್ಲಿನ ಬಂಡಾಯ ಕಾಂಗ್ರೆಸ್ ಗೆ ನುಂಗಲಾರದ ಬಿಸಿ ತುಪ್ಪವಾಗಿದೆಯಾ?
ನಮ್ಮ ಸ್ಥಳೀಯ ನಾಯಕರು ಮತ್ತು ಸಿದ್ದರಾಮಯ್ಯನವರ ನಡುವೆ ಏನು ಮಾತುಕತೆ ನಡೆಯಿತು ಎಂದು ನನಗೆ ಗೊತ್ತಿಲ್ಲ, ಅವರು ಏನು ನಿರ್ಧಾರ ತೆಗೆದುಕೊಂಡರು ಎಂದು ಸಹ ನನಗೆ ಗೊತ್ತಿಲ್ಲ. ಕೆಲವರು ಕಾಂಗ್ರೆಸ್ ನಾಯಕರು ಸಭೆಗೆ ಬಂದರು, ಇನ್ನು ಕೆಲವರು ಬರಲಿಲ್ಲ. ಆದರೆ ಇದರಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ,
ಸುಮಲತಾ ಅವರನ್ನು ಟೀಕಿಸುವ ಮಧ್ಯೆ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯದಲ್ಲಿ ಮತಗಳು ಸಿಕ್ಕಿ ಗೆಲುವು ಸಾಧಿಸುತ್ತಾರೆ ಎಂದು ನಿಮಗೆ ಅನಿಸುತ್ತದೆಯೇ?
-ನಾನು ಯಾವತ್ತೂ ಸುಮಲತಾ ಅವರನ್ನು ಟೀಕಿಸಲಿಲ್ಲ, ಆದರೆ ಅವರ ನಿರ್ಧಾರದಿಂದ ನನಗೆ ಬೇಸರವಾಗಿದೆ. ಅವರ ಹಿತಾಸಕ್ತಿ ದೃಷ್ಟಿಯಲ್ಲಿ ಅಥವಾ ಅಂಬರೀಷ್ ಕನಸಿನ ದೃಷ್ಟಿಯಿಂದ ನೋಡಿದರೆ ಅವರಿಗೆ ಒಳ್ಳೆಯದಲ್ಲ, ಸುಮಲತಾ ಅಂಬರೀಷ್ ಪತ್ನಿಯಾಗಿರಬಹುದು. ನಾವು ಪಕ್ಷದ ಸಹೋದ್ಯೋಗಿಗಳಾಗಿದ್ದವರು. ಶಿವರಾಮೇಗೌಡರು ಅಂಬರೀಷ್ ಆಶೀರ್ವಾದದಿಂದ ಕಳೆದ ಬಾರಿ ಚುನಾವಣೆಗೆ ನಿಂತಿದ್ದರು. ಕಾಂಗ್ರೆಸ್ ಗೆ ಮತ್ತೆ ಸೀಟು ಬಿಟ್ಟುಕೊಡಬೇಕೆಂದು ಕೇಳುವುದಿಲ್ಲ. ಸುಮಲತಾಗೆ ರಾಜಕೀಯಕ್ಕೆ ಬರಬೇಕೆಂದಿದ್ದರೆ ಹಲವು ಅವಕಾಶಗಳಿದ್ದವು, ದ್ವೇಷ ಕಟ್ಟಿಕೊಡುವ ಅಗತ್ಯವಿರಲಿಲ್ಲ.
-ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರಾಗಿ ಬಿಜೆಪಿಯ ಆರ್ ಅಶೋಕ್ ಅವರಿಗೆ ಸಮನಾಗಿ ಬೆಳೆಯುವಲ್ಲಿ ನೀವು ಪೈಪೋಟಿಯಲ್ಲಿದ್ದೀರಾ? ಅಥವಾ ನಿಮ್ಮ ಸಹೋದ್ಯೋಗಿ ಎಂ ಬಿ ಪಾಟೀಲ್ ಜೊತೆ ಸಿಎಂ ಅಭ್ಯರ್ಥಿಯ ಸ್ಪರ್ಧೆಯಲ್ಲಿದ್ದೀರಾ?
ನಾನು ಸಿಎಂ ಅಭ್ಯರ್ಥಿ ಕೂಡ ಅಲ್ಲ, ನಾನು ಯಾರಿಗೂ ಸಹಸ್ಪರ್ಧಿ ಕೂಡ ಅಲ್ಲ, ನಾನು ಕಾಂಗ್ರೆಸ್ ನ ಒಬ್ಬ ಸಣ್ಣ ಕಾರ್ಯಕರ್ತ ಅಷ್ಟೆ, ನಾನು ಯಾವುದೇ ದೊಡ್ಡ ನಾಯಕರ ಜೊತೆ ಸ್ಪರ್ಧಿಸುವುದಿಲ್ಲ.
ಲಿಂಗಾಯತ ವಿವಾದಕ್ಕೆ ಸಂಬಂಧಪಟ್ಟಂತೆ ಎಂ ಬಿ ಪಾಟೀಲ್ ಜೊತೆಗಿನ ವಿವಾದದ ಬಗ್ಗೆ ವಿಷಾದವಿದೆಯೇ?
ನಾನು ಆತ್ಮಸಾಕ್ಷಿಗೆ ಸತ್ಯವಾಗಿ ಮಾತನಾಡುತ್ತೇನೆ, ಯಾವುದೇ ಬೆದರಿಕೆ, ಒತ್ತಡಗಳಿಗೆ ಮಣಿಯುವುದಿಲ್ಲ.
ದಕ್ಷಿಣ ಕನ್ನಡದಲ್ಲಿ ನೀವು ಆರಿಸಿದ ಅಭ್ಯರ್ಥಿ ಮಿಥುನ್ ರೈ ಅಲ್ಪಸಂಖ್ಯಾತರನ್ನು ನಿರಾಸೆಗೊಳಿಸಿದ್ದಾರೆ ಎನಿಸುತ್ತಿದೆಯೇ?
ಹಿಂದುತ್ವ ಅಥವಾ ಹಿಂದೂವಾದ ಬಿಜೆಪಿಯ ಆಸ್ತಿಯಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ದೊಡ್ಡ ದೊಡ್ಡ ದೇವಸ್ಥಾನಗಳು, ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳಿವೆ. ಇದನ್ನು ತಾವು ಹಿಂದೂವಾದಿಗಳೆಂದು ತೋರಿಸಿಕೊಳ್ಳುವವರ ಕೈಗೆ ಕೊಡುವುದು ನಮಗಿಷ್ಟವಿಲ್ಲ. ಮಿಥುನ್ ಯುವನಾಯಕರು, ಅವರು ಕೇವಲ ನನ್ನೊಬ್ಬರ ಆಯ್ಕೆಯಲ್ಲ, ರಾಹುಲ್ ಗಾಂಧಿಯವರೇ ಆರಿಸಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಡಿ ಕೆ ಶಿವಕುಮಾರ್ ಅವರನ್ನು ನೋಡಬಹುದೇ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.