ಕರ್ನಾಟಕ

ಮಂಡ್ಯ: ಜೆಡಿಎಸ್ ಪ್ರಚಾರಕ್ಕೆ ತಲಾ 500 ಕೊಟ್ಟು ಹೊರಗಿನಿಂದ ಜನ; ಆಡಿಯೋ ವೈರಲ್

: ಮಂಡ್ಯದಲ್ಲಿ ಪ್ರಚಾರಕ್ಕಾಗಿ ಜೆಡಿಎಸ್ ಮುಖಂಡರು ಹೊರಗಿನಿಂದ ಜನ ಕರೆಸುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಜೆಡಿಎಸ್ ಸಂಸದ ಎಲ್ ಆರ್ ...

ಮಂಡ್ಯ: ಜೆಡಿಎಸ್ ಪ್ರಚಾರಕ್ಕೆ ತಲಾ 500 ಕೊಟ್ಟು ಹೊರಗಿನಿಂದ ಜನ; ಆಡಿಯೋ ವೈರಲ್
ಎಲ್.ಆರ್ ಶಿವರಾಮೇಗೌಡ
Published On :
ಬೆಂಗಳೂರು: ಮಂಡ್ಯದಲ್ಲಿ ಪ್ರಚಾರಕ್ಕಾಗಿ ಜೆಡಿಎಸ್ ಮುಖಂಡರು ಹೊರಗಿನಿಂದ ಜನ ಕರೆಸುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಜೆಡಿಎಸ್ ಸಂಸದ ಎಲ್ ಆರ್ ಶಿವರಾಮೇಗೌಡರ ಫೋನ್ ಸಂಭಾಷಣೆ ಈ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 
ಈ ಸಂಬಂಧ ಶಿವರಾಮೇಗೌಡ ಮಂಡ್ಯದ ಡಾನ್ ರಮೇಶ್ ಎಂಬುವರ ಜೊತೆ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಸಾಮಾಜಿರ ಜಾಲತಾಣದಲ್ಲಿ ವೈರಲ್ ಆಗಿದೆ, ಚುನಾವಣಾ ಪ್ರಚಾರಕ್ಕೆ ಹೊರಗಿನಿಂದ ಜನರನ್ನು ಕರೆದುಕೊಂಡು ಬಂದರೆ, ತಲಾ 500 ರೂಪಾಯಿ ಕೊಡುವುದಾಗಿ ಶಿವರಾಮೇಗೌಡ ಹೇಳಿರುವ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ. 
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೀಣ್ಯ ಗ್ರಾಮದ ಡಾನ್ ರಮೇಶ್ ಎನ್ನುವವರ ಜತೆ ಮಾತನಾಡಿರೊ ಶಿವರಾಮೇಗೌಡ, ಬೆಂಗಳೂರಿನಿಂದ ಜನರನ್ನು ಕರೆತನ್ನಿ. ತಲೆಗೆ 500 ರೂಪಾಯಿ ಕೊಡುತ್ತೇವೆ.ಕರೆತರಲು ವಾಹನದ ವ್ಯವಸ್ಥೆ ಮಾಡಿ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.