ಕರ್ನಾಟಕ

ಮಂಡ್ಯ: ಸುಮಲತಾ ಅಂಬರೀಷ್ ಪ್ರಚಾರದ ವೇಳೆ ಜೆಡಿಎಸ್ ಬಾವುಟ ಹಾರಿಸಿ ಬೆಂಬಲ!

ಸಕ್ಕರೆ ನಾಡು ಮಂಡ್ಯದಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮಳವಳ್ಳಿ ತಾಲೂಕು ಹಲಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಲತಾ ಅಂಬರೀಷ್ ಇಂದು ಪ್ರಚಾರ ನಡೆಸಿದರು

ಮಂಡ್ಯ: ಸುಮಲತಾ ಅಂಬರೀಷ್ ಪ್ರಚಾರದ ವೇಳೆ ಜೆಡಿಎಸ್ ಬಾವುಟ ಹಾರಿಸಿ ಬೆಂಬಲ!
ಸುಮಲತಾ ಅಂಬರೀಷ್ ಪ್ರಚಾರ
Published On :

ಮಂಡ್ಯ: ಲೋಕಸಭೆ ಚುನಾವಣೆಗೆ ಕೇವಲ ಐದು ದಿನಗಳು ಬಾಕಿ ಇರುವಂತೆಯೇ  ಪ್ರಚಾರದ ಅಖಾಡ ತೀವ್ರಗೊಂಡಿದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯದಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು,  ಮಳವಳ್ಳಿ ತಾಲೂಕು ಹಲಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಲತಾ ಅಂಬರೀಷ್ ಇಂದು ಪ್ರಚಾರ ನಡೆಸಿದರು

ಕೊನ್ನಾಪುರ ಗ್ರಾಮದಲ್ಲಿ ಸುಮಲತಾ ಅವರು ಪ್ರಚಾರಕ್ಕೆ ಬಂದಾಗ ಜೆಡಿಎಸ್ ಬಾವುಟವನ್ನು ಹಿಡಿದ ಕಾರ್ಯಕರ್ತರು  ಪ್ರಚಾರದಲ್ಲಿ ಪಾಲ್ಗೊಳ್ಳುವ ಮೂಲಕ  ಬೆಂಬಲ ಸೂಚಿಸಿದರು. ಎರಡೂ ರಾಷ್ಟ್ರೀಯ ಪಕ್ಷಗಳ ಬಾವುಟಗಳ ಜೊತೆಗೆ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷದ ಬಾವುಟ ಕೂಡಾ ಹಾರಾಡುವ ಮೂಲಕ  ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ವ್ಯಕ್ತಪಡಿಸಲಾಯಿತು.

ಸುಮಲತಾ ಅವರು ಸುಮಾರು 30 ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು.ಹಲವು ಗ್ರಾಮಗಳಲ್ಲಿ ಸುಮಲತಾಗೆ ಅಭಿಮಾನಿಗಳು ಹಾಗೂ ಮತದಾರರು ಅದ್ಧೂರಿ ಸ್ವಾಗತ ಕೋರಿ, ಮತ ಹಾಕುವ ಭರವಸೆ ನೀಡಿದ್ದಾರೆ.
ಈ ಮಧ್ಯೆ ಬೆಳಗಾವಿ ಮತ್ತು ಧಾರವಾಡದಿಂದ ಮಂಡ್ಯಕ್ಕೆ ಆಗಮಿಸಿದ ಮಹಿಳೆಯರ ತಂಡವೊಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ಸದ್ದಿಲ್ಲದೆ ಪ್ರಚಾರ ನಡೆಸುತ್ತಿದೆ.ಮಂಡ್ಯದ ಗ್ರಾಮಾಂತರ ಪ್ರದೇಶದಲ್ಲಿ ಬೆಳಗಾವಿ, ಧಾರವಾಡದ ಮಹಿಳೆಯರ ತಂಡ ಪ್ರಚಾರ ಕೈಗೊಂಡು, ಸ್ಥಳೀಯ ಮಹಿಳೆಯರ ಮತ ಸೆಳೆಯುವ ಪ್ರಯತ್ನ ಮಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.