ಕರ್ನಾಟಕ

ಪ್ರಚಾರ ವೇಳೆ ಹಸುವಿನ ಹಾಲು ಕರೆದ ನಟ ದರ್ಶನ್: ಸುಮಲತಾ ಹೇಳಿದ್ದೇನು?

ಸಕ್ಕರೆ ನಾಡು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ನಟರಾದ ದರ್ಶನ್ ಮತ್ತು ...

ಪ್ರಚಾರ ವೇಳೆ ಹಸುವಿನ ಹಾಲು ಕರೆದ ನಟ ದರ್ಶನ್: ಸುಮಲತಾ ಹೇಳಿದ್ದೇನು?
ಹಸುವಿನ ಹಾಲು ಕರೆಯುತ್ತಿರುವ ನಟ ದರ್ಶನ್
Published On :
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ನಟರಾದ ದರ್ಶನ್ ಮತ್ತು ಯಶ್ ತಮ್ಮದೇ ಶೈಲಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ನಟ ದರ್ಶನ್​ ಗಂತೂ ಮಂಡ್ಯದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು. ಪ್ರಚಾರಕ್ಕೆ ಎಲ್ಲಿ ಹೋದರಲ್ಲಿ ಸ್ವಾಗತಿಸುವ ಜನರು ದರ್ಶನ್ ಗೆ ತಮ್ಮ ನೆಚ್ಚಿನ ನಟನಲ್ಲಿ ಹಲವು ಬೇಡಿಕೆಯಿಡುತ್ತಾರೆ. ನಿನ್ನೆ ಕೆಆರ್​ ಪೇಟೆಯಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ ಅವರಿಗೆ ಜನರು ರೈತರ ಕಷ್ಟ ಅರಿವಾಗಬೇಕಾದರೆ ಹಾಲು ಕರೆಯಿರಿ ಎಂದು ಸವಾಲ್​ ಹಾಕಿದ್ದರು. ಅದನ್ನು ಕೇಳಿದ ದರ್ಶನ್ ಸವಾಲನ್ನು ಸ್ವೀಕರಿಸಿ ತಮ್ಮ ಅಭಿಮಾನಿಯ ಹಸುವಿನ ಹಾಲು ಕರೆದು ತೋರಿಸಿದರು.
ಎಲ್ಲರ ಮೆಚ್ಚುಗೆ ಪಡೆದರು.ದರ್ಶನ್​ ಅವರ ಈ ಕಾರ್ಯಕ್ಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಸುಮಲತಾ ಕೂಡ ದರ್ಶನ್​ ಕಾರ್ಯಕ್ಕೆ ಭೇಷ್​ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.