ಲೋಕಸಭೆ ಚುನಾವಣೆ: ಅಬ್ಬರದ ಪ್ರಚಾರದಿಂದ ದೂರ ಉಳಿದ ಜನಾರ್ಧನ ರೆಡ್ಡಿ
ಪ್ರತಿಯೊಂದು ಪ್ರಮುಖ ಚುನಾವಣೆಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿಸದ್ದು ಮಾಡುತ್ತಿದ್ದ ಬಳ್ಳಾರಿಯ ಗಾಲಿ ಜನಾರ್ಧನ ರೆಡ್ಡಿ ಈಗೆಲ್ಲಿದ್ದಾರೆ? ಈ ಬಾರಿಯ ಲೋಕಸಭೆ ಚುನಾವಣೆ....

Published On :
ಚಿತ್ರದುರ್ಗ: ಪ್ರತಿಯೊಂದು ಪ್ರಮುಖ ಚುನಾವಣೆಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿ ಸದ್ದು ಮಾಡುತ್ತಿದ್ದ ಬಳ್ಳಾರಿಯ ಗಾಲಿ ಜನಾರ್ಧನ ರೆಡ್ಡಿ ಈಗೆಲ್ಲಿದ್ದಾರೆ? ಈ ಬಾರಿಯ ಲೋಕಸಭೆ ಚುನಾವಣೆ ವೇಳೆ ಅವರು ತಟಸ್ಥವಾಗಿದ್ದಾರೆ. ಹಾಗೆಯೇ ಜನರೂ ಸಹ ಅವರ ಕುರಿತಂತೆ ಹೆಚ್ಚು ಮಾತನಾಡುವುದನ್ನೂ ಕೇಳುತ್ತಿಲ್ಲ.
ಜನಾರ್ಧನ ರೆಡ್ಡಿಅವರ ಪರಮಾಪ್ತರಾಗಿದ್ದ ಜೆ. ಶಾಂತಾ ಹಾಗೂ ಸಣ್ಣ ಫಕೀರಪ್ಪ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದ ಕಾರಣ ರೆಡ್ಡಿ ಸಾರ್ವಜನಿಕವಾಗಿ ಪ್ರಚಾರಕ್ಕೆ ಬರುವುದನ್ನೇ ಬಿಟ್ಟಿದ್ದಾರೆ.ಅಲ್ಲದೆ ಬೆಳಗಾವಿಯ ಜಾರಕಿಹೋಳಿ ಸಹೋದರರ ಪ್ರಭಾವ ಹೆಚ್ಚುತ್ತಿದ್ದು ಬಳ್ಲಾರಿಯ ರಾಜಕೀಯ ಕೇಂದ್ರದಿಂದ ರೆಡ್ಡೀಯವರನ್ನು ದೂರ ಸರಿಯುವಂತೆ ಮಾಡಿದೆ.
ಬಿಜೆಪಿಯು ರಮೇಶ್ ಜಾರಕಿಹೋಳಿಯವರ ಮಾವ ದೇವೇಂದ್ರಪ್ಪ ಅವರಿಗೆ ಬಳ್ಳಾರಿಯ ಟಿಕೆಟ್ ನೀಡಿದ್ದರೆ ರಾಯಚೂರಿನಲ್ಲಿ ರಾಜ ಅಮರೇಶ್ ನಾಯಕ್ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಕೇಸರಿ ಪಕ್ಷವು ನಿಧಾನವಾಗಿ ರೆಡ್ಡಿ ಹಾಗೂ ಅವರ ಆಪ್ತ ಶಾಸಕರು, ಬಿ,. ಶ್ರೀರಾಮುಲು ಅವರನ್ನು ದೂರ ಸರಿಸಿದೆ ಎನ್ನಲಾಗುತ್ತಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೆಡ್ಡಿ ಸ್ವತಃ ಬಿಜೆಪಿಗೆಬೆಂಬಲ ಸೂಚಿಸಲಿಲ್ಲ, ಆದರೀ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಪ್ರಚಾರದಲ್ಲಷ್ಟೇ ಭಾಗಿಯಾಗಿದ್ದರು.ಆದರೆ ಪಕ್ಷದ ಅಧ್ಯಕ್ಷ ಅಮಿತ್ ಶಾತಮಗೂ ಜನಾರ್ಧನ ರೆಡ್ಡಿಗೂ ಯಾವ ಸಂಬಂಧವಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದರು.
ಕಳೆದ ಉಪಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಬಿಜೆಪಿ ಸೋಲಿಗೆ ರೆಡ್ಡಿಯ ಕಡಗಣನೆಯೂ ಕಾರಣವೆಂದು ಹೇಳಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಾವಿಗೆ ಶಾಪವೇ ಕಾರಣ ಎಂದು ರೆಡ್ಡಿ ಹಿಂದೊಮ್ಮೆ ಹೇಲಿಕೆ ನೀಡಿದ್ದರು,.ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನನಗೆ ಪದೇ ಪದೇ ವಿನಾಕಾರಣ ತೊಂದರೆ ಕೊಡುತ್ತಿತ್ತು ಎಂದೂ ಹೇಳಿದ್ದರು. ಈ ವಿವಾದಿತ ಹೇಳಿಕೆಗಳಿಗೆ ವಿಪಕ್ಷಗಳಿಂದಷ್ಟೇ ಅಲ್ಲದೆ ಬಿಜೆಪಿಯಿಂದಲೂ ಬಹಳಷ್ಟು ಟೀಕೆಗಳು ಬಂದವು.ಕರ್ನಾಟಕದಲ್ಲಿ ಮಾತ್ರವಲ್ಲದೆ ನೆರೆಹೊರೆಯ ಆಂಧ್ರಪ್ರದೇಶದಲ್ಲಿಯೂ ರೆಡ್ಡಿ ಆಟ ಸಾಗುತ್ತಿಲ್ಲ. ಅವರು ವೈಎಸ್ಆರ್ ಕಾಂಗ್ರೆಸ್ ಗೆ ಬೆಂಬಲ ನೀಡಿದರು, ಆದರೆ ಅವರ ಬೆಂಬಲಿಗರಾದಕಾಪು ರಾಮಚಂದ್ರ ರೆಡ್ಡಿಯವರ ಪ್ರಚಾರಕ್ಕಾಗಿ ಪ್ರಚಾರ ಕೈಗೊಳ್ಳಲಿಲ್ಲ. ಅವರು ರಾಯದುರ್ಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಆದರೆ ಜನರ್ಧನರೆಡ್ಡಿ ತಾವು ಅಲ್ಲಿಗೆ ಸಹ ತೆರಳಲಿಲ್ಲ.
ರೆಡ್ಡಿ ಅವರ ನಿಕಟ ಸಹಾಯಕ ಯಶಸ್ ಕೀರ್ತಿ , "ಜನಾರ್ಧನ್ ರೆಡ್ಡಿ ಕಡಪ ಮತ್ತು ಅನಂತಪುರದ ಆಂಧ್ರಪ್ರದೇಶ ಚುನಾವಣೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಪ್ರಸ್ತುತ ಅವರು ಹೈದರಾಬಾದ್ ನಲ್ಲಿದ್ದಾರೆ. ಏಪ್ರಿಲ್ 23 ರಂದು ಮತದಾನ ನಡೆಯುವ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಜೆಪಿ ಪರ ಅಭಿಯಾನ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಗದಗದಲ್ಲಿ ಮತದಾರರ ಪಟ್ಟಿಗೆ ಸೇರಲು ತಯಾರಿ
ಬಳ್ಲಾರಿ ಜಿಲ್ಲೆ ಪ್ರವೇಶಕ್ಕೆ ರೆಡ್ಡಿಗೆ ನಿಷೇಧ ಹೇರಿರುವ ನ್ಯಾಯಾಲಯದ ಕ್ರಮವನ್ನು ಮುಂದಿಟ್ಟುಕೊಂಡು ಜನಾರ್ಧನ ರೆಡ್ಡಿ ತಾವು ಗದಗದಲ್ಲಿ ಚುನಾವಣೆ ಮತದಾನ ಮಾಡುವುದಾಗಿ ಹೇಳೀದ್ದಾರೆ. ಅವರು ಅದಕ್ಕಾಗಿ ಗದಗದಲ್ಲಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸಲು ಪ್ರಯತ್ನದಲ್ಲಿದ್ದಾರೆ. ಗದಗದ ಬಸ್ ನಿಲ್ದಾಣದ ಬಳಿ ಶ್ರೀರಾಮುಲು ಅವರ ಬಾಡಿಗೆಗೆ ನೀಡಿರುವ ಮನೆ ವಿಳಾಸವನ್ನು ಅವರು ಚುನಾವನಾಧಿಕಾರಿಗಳಿಗೆ ಕೊಟ್ಟಿದ್ದಾರೆ.ಆದರೆ ಚುನಾವಣಾ ಅಧಿಕಾರಿಗಳು ಮಾತ್ರ ಅವರ ಅರ್ಜಿಯನ್ನು ತಿರಸ್ಲರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


