ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಜ್ಜನ ವ್ಯಕ್ತಿ: ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಜ್ಜನ, ಸೌಮ್ಯ ವ್ಯಕ್ತಿತ್ವ ಹೊಂದಿರುವವರು. ಅವರ ಒಳ್ಳೆಯ ...

Published On :
ಚಿಕ್ಕಮಗಳೂರು: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಜ್ಜನ, ಸೌಮ್ಯ ವ್ಯಕ್ತಿತ್ವ ಹೊಂದಿರುವವರು. ಅವರ ಒಳ್ಳೆಯ ಗುಣದಿಂದಾಗಿಯೇ ಪಾಕ್ ಸೇನೆಗೆ ಸಿಕ್ಕಿಬಿದ್ದ ಭಾರತದ ಪೈಲಟ್ ಅಭಿನಂದನ್ ವರ್ಥಮಾನ್ ಅವರನ್ನು ಸುರಕ್ಷಿತವಾಗಿ ವಾಪಸ್ ಕಳಿಸಿದ್ದಾರೆ ಎಂದು ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರು ನಿನ್ನೆ ಚಿಕ್ಕಮಗಳೂರಿನ ಎನ್ ಆರ್ ಪುರ ತಾಲ್ಲೂಕಿನ ಮೆಣಸೂರಿನಲ್ಲಿ ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾತನಾಡಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಯದಿಂದ ಭಾರತದ ಪೈಲಟ್ ನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಲ್ಲ, ಬದಲಿಗೆ ಸೌಜನ್ಯಕ್ಕೆ ಎಂದರು. ಇನ್ನು ಪ್ರಧಾನಿ ಮೋದಿಯನ್ನ ಟೀಕಿಸುವ ಭರದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರನ್ನ ಹಾಡಿ ಹೊಗಳಿದ್ದಾರೆ. ಇದರಿಂದ ರಾಜೇಗೌಡ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಗೋವಾದಿಂದ 2 ಬಾಟಲಿ ವಿಸ್ಕಿ ತಂದರೆ ದಂಡ ಹಾಕುತ್ತಾರೆ. 350 ಕೆ.ಜಿ. ಆರ್.ಡಿ.ಎಕ್ಸ್ ನ ಜೀಪಿನಲ್ಲಿ ತಂದು ಸೈನಿಕರ ಬಸ್ಸಿಗೆ ಗುದ್ದಿ ಸೈನಿಕರ ಹತ್ಯೆ ಮಾಡುತ್ತಾರೆ. ಮೋದಿಯವರೆ ಆಗ ಎಲ್ಲೋಗಿತ್ತು ನಿಮ್ಮ 56 ಇಂಚಿನ ಎದೆ, ನಿಮ್ಮ ಶೌರ್ಯ ಎಂದು ಮೋದಿಯನ್ನ ಟೀಕಿಸಿದ್ದಾರೆ. ಮೋದಿ ನೋಡಿ ಪಾಕಿಸ್ತಾನ ಹೆದರಲ್ಲ. ನಮ್ಮ ದೇಶದ ಜನ, ಸೈನಿಕರು ಹಾಗೂ ಭಾವನೆಗಳಿಗೆ ಬೇರೆ ದೇಶಗಳು ಬೆಲೆ ಕೊಡುತ್ತಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PM Narendra ModiPoliticsಇಮ್ರಾನ್ ಖಾನ್Imran KhanPakistanಪಾಕಿಸ್ತಾನಪಿಎಂ ನರೇಂದ್ರ ಮೋದಿShringeri MLA T D Raje Gowdaಶೃಂಗೇರಿ ಶಾಸಕ ಟಿ ಡಿ ರಾಜೇಗೌಡ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


