ಬೆನ್ನಿಗೆ ಚೂರಿ ಹಾಕಿದ್ರು-ಕುಮಾರಸ್ವಾಮಿ: ಹೆಚ್ ಡಿಕೆಯದ್ದು ದ್ವೇಷ ರಾಜಕಾರಣ, ನಿಖಿಲ್ ಪರ ಪ್ರಚಾರವಿಲ್ಲ: ಚಲುವರಾಯಸ್ವಾಮಿ
ಬೆನ್ನಿಗೆ ಚೂರಿ ಹಾಕಿದರು ಎಂಜು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ, ಆದರೆ ಅವರ ಬೆನ್ನಿಗೆ ಯಾರು ಚೂರಿ ಹಾಕಿದ್ದಾರೊ ಗೊತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ...

Published On :
ಮಂಡ್ಯ: ಬೆನ್ನಿಗೆ ಚೂರಿ ಹಾಕಿದರು ಎಂಜು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ, ಆದರೆ ಅವರ ಬೆನ್ನಿಗೆ ಯಾರು ಚೂರಿ ಹಾಕಿದ್ದಾರೊ ಗೊತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. 'ನಾವು ಬೇಡ ಎಂದು ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ, ಹೀಗಾಗಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ನಾವು ಪ್ರಚಾರ ಮಾಡಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದೆವು. ಆದರೆ, ಫಲಿತಾಂಶದ ಬಳಿಕ ಜೆಡಿಎಸ್ ನಾಯಕರು ಸೌಜನ್ಯಕ್ಕೂ ನಮ್ಮನ್ನು ಕರೆದು ಮಾತನಾಡಿಸಲಿಲ್ಲ. ಫಲಿತಾಂಶಕ್ಕೆ ಜಿಲ್ಲೆಯ ಜನತೆ ಕಾರಣ ಎಂದು ಹೇಳಿಕೊಂಡರು. ಹೀಗಾಗಿ, ನಾವು ಈ ಸಲ ತಟಸ್ಥರಾಗಿ ಉಳಿಯುತ್ತೇವೆ. ತೀರ್ಪನ್ನು ಜನರಿಗೇ ಬಿಡೋಣ ಎಂದಿದ್ದಾರೆ.
ನಾನು ಸುಮಲತಾ ಪರವಾಗಿ ಕೆಲಸ ಮಾಡುತ್ತಿಲ್ಲ, ಮಾಡಿ ಎಂದು ಯಾರಿಗೂ ಹೇಳಿಲ್ಲ, ಮಂಡ್ಯದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ ನಂತರ ಕೊನೇ ಪಕ್ಷ ಒಂದು ಸಭೆ ನಡೆಸಿ ನಮ್ಮನ್ನು ಕರೆದು ಪ್ರಚಾರದಲ್ಲಿ ಭಾಗಿಯಾಗಿ ಎಂದು ಹೇಳಬಹುದಿತ್ತ, ಆದರೆ ಅದನ್ನು ಮಾಡದೇ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
KumaraswamyPoliticsರಾಜಕೀಯಎಚ್.ಡಿ ಕುಮಾರಸ್ವಾಮಿcampaignMandyaಪ್ರಚಾರಚಲುವರಾಯಸ್ವಾಮಿCheluvarayaswamyNikhilನಿಖಿಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


