ಕರ್ನಾಟಕ

ಮೋದಿ ಹಾಗೆ ಅಲ್ಲ, ನಾನು ದಿನಕ್ಕೆ ಒಂದೇ ಬಾರಿ ಮುಖ ತೊಳೆಯುತ್ತೇನೆ: ಕುಮಾರಸ್ವಾಮಿ

ಮೋದಿ ಬೆಳಿಗ್ಗೆ ಹೊರಡುವಾಗ ಮುಖ ಪಳಪಳ ಹೊಳೆಯುವಂತೆ ವ್ಯಾಕ್ಸ್​ ಮಾಡಿಸಿಕೊಳ್ಳುತ್ತಾರೆ. ಆದರೆ ನಾವು ಬಿಸಿಲು, ಮಳೆಯಲ್ಲಿ ಅಡ್ಡಾಡುತ್ತೇವೆ, ದಿನಕ್ಕೆ ಒಂದೇ ಬಾರಿ ಮುಖ ತೊಳೆಯುವುದು...

ಮೋದಿ ಹಾಗೆ ಅಲ್ಲ, ನಾನು ದಿನಕ್ಕೆ ಒಂದೇ ಬಾರಿ ಮುಖ ತೊಳೆಯುತ್ತೇನೆ: ಕುಮಾರಸ್ವಾಮಿ
ಕುಮಾರಸ್ವಾಮಿ
Published On :
ಉಡುಪಿ: "ಮೋದಿ ಬೆಳಿಗ್ಗೆ ಹೊರಡುವಾಗ ಮುಖ ಪಳಪಳ ಹೊಳೆಯುವಂತೆ ವ್ಯಾಕ್ಸ್​ ಮಾಡಿಸಿಕೊಳ್ಳುತ್ತಾರೆ. ಆದರೆ ನಾವು ಬಿಸಿಲು, ಮಳೆಯಲ್ಲಿ ಅಡ್ಡಾಡುತ್ತೇವೆ, ದಿನಕ್ಕೆ ಒಂದೇ ಬಾರಿ ಮುಖ ತೊಳೆಯುವುದು..." ಹೀಗೆಂದು ಹೇಳಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ.
ಏ.07 ರಂದು ಉಡುಪಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ. ಮೋದಿ ಮುಖ ಹೊಳೆಯುತ್ತದೆ. ಹೊಳೆಯುವಂತೆ ಮಾಡಿಕೊಳ್ಳುತ್ತಾರೆ. ಆದರೆ ನಾನು ಹಾಗಲ್ಲ ದಿನಕ್ಕೆ ಒಂದೇ ಬಾರಿ ಮುಖ ತೊಳೆಯೋದು. ನಿಮಗೂ ಮೋದಿ ಮುಖವೇ ಇಷ್ಟವಾಗುತ್ತದೆ, ನಾನು ನಿಮಗೆ ಇಷ್ಟವಾಗೋದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾವೆಲ್ಲ ರಸ್ತೆಯಲ್ಲಿ ಹೋಗುತ್ತಿದ್ದರೆ ಮೋದಿ.... ಮೋದಿ.... ಎಂದು ಕೂಗುವ ಶೋಕಿ ಪ್ರಾರಂಭವಾಗಿದೆ. ಹಾಗೆ ಕೂಗುವವರಿಗೆಲ್ಲಾ ಮೋದಿ ಏನು ಮಾಡಿದ್ದಾರೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 
ಕರಾವಳಿ ಜನತೆಯ ಬಗ್ಗೆ ಲಘುವಾಗಿ ತಾವೆಂದೂ ಮಾತನಾಡಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ, ಕರಾವಳಿ ಭಾಗದ ಜನರು ಉತ್ತಮ ತಿಳುವಳಿಕೆ ಹೊಂದಿರುವವರು, ತಿಳುವಳಿಕೆ ಇದ್ದರೂ ಯಾಕೆ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಕೇಳಿದ್ದೆ ಅಷ್ಟೇ ಎಂದು  ಹೇಳಿದ್ದಾರೆ.
ಮೋದಿ ಇಲ್ಲದಿದ್ದರೆ ದೇಶಕ್ಕೆ ರಕ್ಷಣೆಯೇ ಇಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಮೋದಿ ಒಬ್ಬರೇನಾ ದೇಶ ರಕ್ಷಣೆ ಮಾಡುವವರು? ವಾಜಪೇಯಿ ಈ ರಾಷ್ಟ್ರಕ್ಕೆ ಭದ್ರತೆ ನೀಡಿಲ್ಲವಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.