ಯುವನೇತಾರ ಎಂಬ ಹೆಸರಿಂದಲೇ ನನಗೆ ಹೆಚ್ಚು ಪ್ರಯೋಜನ: ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಭಾಷೆ ಮತ್ತು ರಾಜಕೀಯ ಪರಿಪಕ್ವತೆಯುಳ್ಳ ವ್ಯಕ್ತಿ, ತಮ್ಮ ಬಗ್ಗೆ ಬರುವ ಎಲ್ಲಾ ಟೀಕೆಗಳಿಗೆ ಉತ್ತರಿಸದಿರಲು ..

Published On :
ಬೆಂಗಳೂರು: ತಮ್ಮ ವಯಸ್ಸಿನ ಬಗ್ಗೆ ಕೇಳುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸುವ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಭಾಷೆ ಮತ್ತು ರಾಜಕೀಯ ಪರಿಪಕ್ವತೆಯುಳ್ಳ ವ್ಯಕ್ತಿ, ತಮ್ಮ ಬಗ್ಗೆ ಬರುವ ಎಲ್ಲಾ ಟೀಕೆಗಳಿಗೆ ಉತ್ತರಿಸದಿರಲು ನಿರ್ಧರಿಸಿರುವ ತೇಜಸ್ವಿ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಭವಿಷ್ಯದ ದೂರದೃಷ್ಟಿ ಬಗ್ಗೆ ಮಾತನಾಡಿದ್ದಾರೆ,.
ಪ್ರ: ಯುವ ನೇತಾರನಾಗಿ ನಿಮ್ಮ ಪ್ರಚಾರದ ವೈಖರಿ ಹೇಗಿರುತ್ತದೆ?
ಆಧುನಿಕತೆ ಮತ್ತು ಸಾಂಪ್ರದಾಯಿಕ ಶೈಲಿ ಬೆರೆತ ರಾಜಕೀಯ ಶೈಲಿ ನಮ್ಮದು, ನಾವು ಮಠಾಧೀಶರನ್ನು ಭೇಟಿ ಮಾಡುತ್ತೇವೆ ಸಮುದಾಯಗಗಳ ಜೊತೆ ಸಭೆಯನ್ನು ನಡೆಸುತ್ತೇವೆ, ಕೆಫೆ, ಸ್ಟಾರ್ಟ್ ಅಪ್ ಕಂಪನಿಗಳು ಹಾಗೂ ಕಾಲೇಜು ಸಮಾರಂಭಗಳಲ್ಲಿ ಚರ್ಚಿಸುತ್ತೇವೆ. ನಮ್ಮ ರಾಜಕೀಯ ಭಾಷೆ ಹೆಚ್ಚು ಆಧುನಿಕವಾಗಿಗದೆ, ಚುನಾವಣಾ ಭಾಷಣ ಹೆಚ್ಚು ಮಹತ್ವ ಪಡೆದಿದೆ, ಇದರಿಂದ ಹೆಚ್ಚೆಚ್ಚು ಜನ ಬರುತ್ತಾರೆ, ನನ್ನ ವಯಸ್ಸಿನವರು ಬ್ರೊ ಎಂದು ಕರೆಯುತ್ತಾರೆ, ಹಿರಿಯ ಮಹಿಳೆಯರು ಆಶೀರ್ವದಿಸುತ್ತಾರೆ, ಹಿರಿಯ ನಾಗರಿಕರು ತಮ್ಮ ಮೊಮ್ಮಗನಂತೆ ನೋಡುತ್ತಾರೆ ಒಟ್ಟಾರೆ ನನಗೆ ಪ್ಯಾಮಿಲಿ ಪ್ಯಾಕೇಜ್ ಸಿಕ್ಕಿದೆ.,ಯುವ ನೇತಾರನಾಗಿರುವುದು ನನಗೆ ಸಹಾಯವಾಗಿದೆ.
ಪ್ರ: ನಿಮ್ಮ ಪರ ಅಮಿತ್ ಶಾ ಪ್ರಚಾರದಿಂದ ಪಕ್ಷದ ಒಳಗೆ ಮತ್ತು ಹೊರಗೆ ಏನೆಲ್ಲಾ ಬದಲಾವಣೆ ತಂದಿದೆ?
ರಾಜ್ಯದಲ್ಲಿ ಮೊದಲಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಮಿತ್ ಶಾ ರ್ಯಾಲಿ ನಡೆಸಿದರು, ಈ ಕ್ಷೇತ್ರದ ಬಗ್ಗೆ ಜನರಿಗೆ ಹೆಚ್ಚಿನ ನಂಬಿಕೆಯಿದೆ, ಬೆಂಗಳೂರು ದಕ್ಷಿಣ ಲೋಕಸಭೆ ಬಿಜೆಪಿ ಭದ್ರಕೋಟೆ, ನನ್ನ ರಾಜಕೀಯ ಜೀವನ ಇಲ್ಲಿಂದಲೇ ಆರಂಭವಾಗಿರುವುದು ಪ್ರತಿಷ್ಠೆಯ ವಿಷಯ
ಪ್ರ: ನಿಮ್ಮ ಪರವಾಗಿ ಅಮಿತ್ ಶಾ ರೋಡ್ ಶೋ ನಡೆಸಿದ್ದು ಹಲವರಿಗೆ ಅಸಹನೆ ಮೂಡಿಸಿದೆಯೇ?
ಎಲ್ಲಾ ಹಿರಿಯ ನಾಯಕರು ನನ್ನ ಬೆನ್ನ ಹಿಂದೆ ಇದ್ದಾರೆ, ವಿ ಸೋಮಣ್ಣ ಮತ್ತು ಆರ್.ಅಶೋಕ್ ಸೇರಿದಂತೆ ಎಲ್ಲಾ ಹಿರಿಯ ಶಾಸಕರ ಆಶೀರ್ವಾದ ನನಗಿದೆ, ಹಿರಿಯ ನಾಯಕರು ಬೆಂಬಲ ನೀಡದಿದ್ದರೇ ರೋಡ್ ಶೋ ಯಶಸ್ವಿಯಾಗುತ್ತಿರಲಿಲ್ಲ,
ಪ್ರ: ನಿಮ್ಮ ವಿರೋಧಿ ಅಭ್ಯರ್ಥಿ ಬಗ್ಗೆ ನಿಮ್ಮ ಅಭಿಪ್ರಾಯ?
ವಯಕ್ತಿಕವಾಗಿ ನಾನು ಬಿ,ಕೆ ಹರಿಪ್ರಸಾದ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಅವರ ವಿರುದ್ಧವಾಗಿ ನಾನು ಯಾವುದೇ ನೆಗೆಟಿವ್ ಕಾಮೆಂಟ್ ಮಾಡುವುದಿಲ್ಲ, ವಿರೋಧಿಯ ಬಲಹೀನತೆ ಎತ್ತಿ ಹಿಡಿದು ತೋರಿಸುವುದು ನನ್ನ ಉದ್ದೇಶವಿಲ್ಲ,
ಪ್ರ: ನಿಮ್ಮ ವಿರುದ್ಧದ ಬಂದ ನಿಂದನೆ ನಿಮ್ಮ ಪ್ರಚಾರದ ಮೇಲೆ ಪ್ರಭಾವ ಬೀರಲಿದ್ಯಾ?
ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ನನ್ನ ವಿರುದ್ಧ ಕೆಲವು ಕಾರ್ಯತಂತ್ರ ನಡೆಸಲಾಯಿತು, ಇದು ರಾಜಕೀಯ ಹಿತಾಸಕ್ತಿಗಾಗಿ ನಡೆದ ಷಡ್ಯಂತ್ರ, ನನ್ನ ರಾಜಕೀಯ ವಿರೋಧಿಗಳಿಗೆ ಒಳ್ಳೆಯಾದಾಗಲಿ ಎಂದು ನಾನು ಬಯಸುತ್ತೇನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


