ಸುಮಲತಾ ನಮ್ಮ ಹೆಣ್ಣುಮಗಳು, ಅವಮಾನ ಮಾಡುವುದು ಸರಿಯಲ್ಲ: ಎಚ್.ವಿಶ್ವನಾಥ್
ನಾನು ಕಾಂಗ್ರೆಸ್ ಯಾಕೆ ಬಿಟ್ಟೆ ಎಂಬುದನ್ನು ಸಿದ್ದರಾಮಯ್ಯ ಅವರಿಗೆ ಕೇಳಿ ಎಂದು ಹೇಳಿದ, ನಾನು ಕಾಂಗ್ರೆಸ್ ಬಿಟ್ಟಾಗ ಹೈಕಮಾಂಡ್ ವೀಕ್ ಆಗಿತ್ತು ಎಂಬುದಾಗಿ ತಿಳಿಸಿದ್ದಾರೆ...

Published On :
ಬೆಂಗಳೂರು: ಸುಮಲತಾ ಅಂಬರೀಷ್ ನಮ್ಮ ಮನೆ ಮಗಳು, ಅವರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ,
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಜಾತಿ ವಿಷಯ ಮಾತನಾಡುವುದು ಸರಿಯಲ್ಲ, ಜಾತಿ ರಾಜಕೀಯ ಎಳೆದು ತಂದಿದ್ದು ಸರಿಯಲ್ಲ, ಜಾತಿ ಬಗ್ಗೆ ಮಾತನಾಡಿರುವ ಸಂಸದ ಎಲ್ ಆರ್ ಶಿವರಾಮೇಗೌಡ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನೂ ನಾನು ಕಾಂಗ್ರೆಸ್ ಯಾಕೆ ಬಿಟ್ಟೆ ಎಂಬುದನ್ನು ಸಿದ್ದರಾಮಯ್ಯ ಅವರಿಗೆ ಕೇಳಿ ಎಂದು ಹೇಳಿದ, ನಾನು ಕಾಂಗ್ರೆಸ್ ಬಿಟ್ಟಾಗ ಹೈಕಮಾಂಡ್ ವೀಕ್ ಆಗಿತ್ತು ಎಂಬುದಾಗಿ ತಿಳಿಸಿದ್ದಾರೆ, ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಲ್ಲ ಬಿಜೆಪಿ ಅಭ್ಯರ್ಥಿ ಎಂದು ಹೇಳಿದ್ದಾರೆ,
ಯಾರಿಗೂ ಬಾವುಟ ಹಿಡಿಯಬೇಡಿ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಭಾವುಟ ಹಿಡಿದ ಮಾತ್ರಕ್ಕೆ ಮತ ಹಾಕುತ್ತಾರೆ ಎಂಬುದು ಸುಳ್ಳು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
JDSರಾಜಕೀಯಜೆಡಿಎಸ್ಮಂಡ್ಯMandyacaste politicsH Vishwanathಎಚ್. ವಿಶ್ವನಾಥ್ಸುಮಲತಾ ಅಂಬರೀಷ್Sumalatha Ambhareesh
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


