ಕರ್ನಾಟಕ

'ಏಪ್ರಿಲ್18ಕ್ಕೆ ಸುಮಲತಾ ಟೂರಿಂಗ್ ಟಾಕೀಸ್ ಪ್ಯಾಕಪ್: ಆಮೇಲೆ ಹುಡ್ಕೊಂಡು ಗಾಂಧಿನಗರಕ್ಕೆ ಹೋಗಬೇಕು'

ಏಪ್ರಿಲ್ 18ಕ್ಕೆ ಸುಮಲತಾ ಅವರ ಟೂರಿಂಗ್ ಟಾಕೀಸ್ ಸಿನಿಮಾ ಶೂಟಿಂಗ್ ಪ್ಯಾಕಪ್ ಆಗಲಿದೆ, ಆಮೇಲೆ ಯಾವ ಸುಮಕ್ಕನೂ ಇಲ್ಲ, ಪಮಕ್ಕನೂ ಇಲ್ಲ, ಅವರನ್ನು ...

'ಏಪ್ರಿಲ್18ಕ್ಕೆ ಸುಮಲತಾ ಟೂರಿಂಗ್ ಟಾಕೀಸ್ ಪ್ಯಾಕಪ್: ಆಮೇಲೆ ಹುಡ್ಕೊಂಡು ಗಾಂಧಿನಗರಕ್ಕೆ ಹೋಗಬೇಕು'
ಸುಮಲತಾ ಅಂಬರೀಷ್
Published On :
ಮಂಡ್ಯ: ಏಪ್ರಿಲ್ 18ಕ್ಕೆ ಸುಮಲತಾ ಅವರ ಟೂರಿಂಗ್ ಟಾಕೀಸ್ ಸಿನಿಮಾ ಶೂಟಿಂಗ್ ಪ್ಯಾಕಪ್ ಆಗಲಿದೆ, ಆಮೇಲೆ  ಯಾವ ಸುಮಕ್ಕನೂ ಇಲ್ಲ, ಪಮಕ್ಕನೂ ಇಲ್ಲ, ಅವರನ್ನು ಹುಡುಕಿಕೊಂಡು ಗಾಂಧಿನಗರಕ್ಕೆ ಹೋಗಬೇಕು, ಶೂಟಿಂಗ್ ಮುಗಿಸಿದ ಎಲ್ಲಾ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ, ಇದು ಕೂಡ ಹಾಗೆಯೇ ಎಂದು ಸಂಸದ ಎಲ್, ಆರ್ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಶಿವರಾಮೇಗೌಡ ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ. ಅವನ್ಯಾರೋ ರಾಕ್ ಲೈನ್ ಅಂತೆ, ಅವನು ದರ್ಶನ್ ಇವತ್ತು ಪ್ರಚಾರಕ್ಕೆ ಬಂದಿದ್ದನಲ್ಲ, ಅವನು ಕೂಡ ನಾಯ್ಡು, ಹೀಗಾಗಿ ಅವರು ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.
ಇನ್ನೂ ಅಂಬರೀಷ್ ವಸತಿ ಸಚಿವರಾಗಿದ್ದಾಗ ಎಷ್ಟು ಮಂದಿ ಬಡವರಿಗೆ ಮನೆ ಕೊಡಿಸಿದ್ದಾರೆ ಎಂದು ಪ್ರಶ್ನಿಸಿದ ಶಿವರಾಮೇಗೌಡ ಅಂಬರೀಷ್ ಇದ್ದಾಗ ಸುಮಲತಾ ಮನೆಯಲ್ಲಿ ಗೌರಮ್ಮನ ತರ ಇದ್ದರು, ಅಂಬರೀಷ್ ಅವರು ನಿಧನರಾದಾಗ ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತರಲಾಯಿತು, ಆಗ ಮಂಡ್ಯಕೆ ಹರಿದು ಬಂದ ಜನಸಾಗರವನ್ನು ನೋಡಿದ ಸುಮಲತಾ ಇವರೆಲ್ಲಾ ನನಗೆ ಮತ ಹಾಕುತ್ತಾರೆ ಎಂದು ಭಾವಿಸಿದ್ದಾರೆ ಎಂದು ಶಿವರಾಮೇಗೌಡ ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.