ಲೋಕಾ ಸಮರ 2019: ಫಲಿತಾಂಶ ಪ್ರಸಾರ ಕುರಿತು ಟಿವಿ ವಾಹಿನಿಗಳಿಗೆ ಕೇಂದ್ರದ ಮಾರ್ಗಸೂಚಿ ಬಿಡುಗಡೆ
ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ಈ ಹಂತದಲ್ಲಿ ಟಿವಿ ವಾಹಿನಿಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ.

Published On :
ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ಈ ಹಂತದಲ್ಲಿ ಟಿವಿ ವಾಹಿನಿಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ.
ಅದರಂತೆ ಎಲ್ಲ ಖಾಸಗಿ ವಾಹಿನಿಗಳೂ 2011ರ ಮಾರ್ಗದರ್ಶಿ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರಲಾಗಿದ್ದು, ಸಂಬಂಧ ಪಟ್ಟ ವಾಹಿನಿಗಳು ಮಾತ್ರ ಫಲಿತಾಂಶ ಪ್ರಕಟಣೆ ಪ್ರಸಾರ ಮಾಡಬಹುದು ಎಂದು ಇಲಾಖೆ ಸ್ಪಷ್ಟ ಪಡಿಸಿದೆ. ಇದಕ್ಕಾಗಿ ಇಲಾಖೆ ವಾಹಿನಿಗಳನ್ನು 2 ವಿಭಾಗವಾಗಿ ವಿಂಗಡಿಸಿದ್ದು, ಅದರಂತೆ ವಾಹಿನಿಹಗಳ ನೊಂದಾವಣಿ ಆಧಾರದ ಮೇಲೆ ಅವುಗಳಿಗೆ ಚುನಾವಣಾ ಫಲಿತಾಂಶ ಪ್ರಸಾರಕ್ಕೆ ಅನುಮತಿ ನೀಡಲಾಗಿದೆ.
ಅಂದರೆ ನೋಂದಾವಣಿ ಸಂದರ್ಭದಲ್ಲಿ ಯಾವೆಲ್ಲಾ ವಾಹಿನಿಗಳು ಸುದ್ದಿ ಮತ್ತು ಪ್ರಚಲಿತ ವಿದ್ಯಮಾನ ವಿಭಾಗದಲ್ಲಿ ನೊಂದಾಯಿಸಿಕೊಂಡಿವೆಯೇ ಅಂತಹ ವಾಹಿನಿಗಳಿಗೆ ಮಾತ್ರ ಚುನಾವಣಾ ಫಲಿತಾಂಶ ಪ್ರಕಟಣೆಗೆ ಅವಕಾಶ ಕೊಡಲಾಗಿದೆ. ಅಂತೆಯೇ ಮನರಂಜನೆ ವಿಭಾಗದಲ್ಲಿ ನೊಂದಾಯಿಸಿಕೊಂಡಿರುವ ವಾಹಿನಿಗಳು ಫಲಿತಾಂಶ ಪ್ರಸಾರ ಮಾಡಬಾರದು ಎಂದು ಸೂಚಿಸಲಾಗಿದೆ. ಅಂತೆಯೇ ಈ ನಿಯವನ್ನು ವಾಹಿನಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೋರಲಾಗಿದೆ.
ಮನರಂಜನೆ ವಿಭಾಗದಲ್ಲಿ ನೊಂದಾಯಿಸಿಕೊಂಡಿರುವ ಯಾವುದೇ ವಾಹಿನಿಗಳೂ ಚುನಾವಣೆ ಫಲಿತಾಂಶ ಕುರಿತು ಸುದ್ದಿ ಅಥವಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಾಹಿತಿಲೋಕಸಭಾ ಚುನಾವಣೆ 2019Loksabha Election 2019Poll Results 2019Loksabha Election countingInformation And Broadcast Ministryಚುನಾವಣಾ ಫಲಿತಾಂಶ 2019ಲೋಕಸಭಾ ಚುನಾವಣಾ ಮತಎಣಿಕೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


