ಆಲ್ ಇಂಡಿಯಾ ರೇಡಿಯೋದಲ್ಲಿ ಮತ ಎಣಿಕೆ ವಿಸ್ತೃತ ವರದಿ, 40 ಗಂಟೆಗಳ ವಿಶೇಷ ಪ್ರಸಾರ
ಹಾಲಿ ಲೋಕಸಭಾ ಚುನಾವಣೆಯ ಫಲಿತಾಂಶದ ವಿಸ್ಮೃತ ವರದಿಯನ್ನು ಸರ್ಕಾರಿ ಸ್ವಾಮ್ಯದ ಆಲ್ ಇಂಡಿಯಾ ರೇಡಿಯೊ ಪ್ರಸಾರ ಮಾಡಲಿದ್ದು, ಇದಕ್ಕಾಗಿ 40 ಗಂಟೆಗಳ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡಿದೆ.

Published On :
ನವದೆಹಲಿ: ಹಾಲಿ ಲೋಕಸಭಾ ಚುನಾವಣೆಯ ಫಲಿತಾಂಶದ ವಿಸ್ಮೃತ ವರದಿಯನ್ನು ಸರ್ಕಾರಿ ಸ್ವಾಮ್ಯದ ಆಲ್ ಇಂಡಿಯಾ ರೇಡಿಯೊ ಪ್ರಸಾರ ಮಾಡಲಿದ್ದು, ಇದಕ್ಕಾಗಿ 40 ಗಂಟೆಗಳ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಬಗ್ಗೆ ಸ್ವತಃ ಆಲ್ ಇಂಡಿಯಾ ರೇಡಿಯೋ ಪ್ರಕಟಣೆ ನೀಡಿದ್ದು, ಎಐಆರ್ ಇದೇ ಮೇ.23ರಂದು ಲೋಕಸಭೆ ಮತ್ತು 4 ರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶಗಳ ಅಧಿಕೃತ ಮತ್ತು ಕ್ಷಣಕ್ಷಣದ ಮಾಹಿತಿಯ ವರದಿ ಬಿತ್ತರಿಸಲು ವಿಸ್ತೃತ ಪೂರ್ವಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳಿದೆ.
ದೇಶದ ಬೃಹತ್ ರೇಡಿಯೊ ಜಾಲವೆನಿಸಿರುವ ಎಐಆರ್, ಇದೇ ಮೊದಲ ಬಾರಿಗೆ ನಿರಂತರವಾಗಿ 40 ಗಂಟೆಗಳ ಚುನಾವಣಾ ಫಲಿತಾಂಶ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಎಐಆರ್, ‘ವಿಶೇಷ ಜನಾದೇಶ 2019’ ಎಂಬ ಕಾರ್ಯಕ್ರಮವನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮೇ.23ರ ಬೆಳಿಗ್ಗೆ 7ರಿಂದ ಮೇ.24ರ ರಾತ್ರಿ 11 ಗಂಟೆಯವರೆಗೆ ಪ್ರಸಾರ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ವೇಳೆ ಎಐಆರ್ ಸ್ಟುಡಿಯೋದಲ್ಲಿನ ತಜ್ಞರು ಜನರಿಗೆ ವರದಿ ಮತ್ತು ವಿಶ್ಲೇಷಣೆ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


