ಮೊಹಮ್ಮದ್ ಬಿನ್ ತುಘಲಕ್ ಜೊತೆಗೆ ಮೋದಿ ಹೋಲಿಸಿದ ಅಜಾದ್
14 ನೇ ಶತಮಾನದ ವಿವಾದಾತ್ಮಕ ದೆಹಲಿ ಸುಲ್ತಾನ ಮೊಹಮ್ಮದ್ ಬಿನ್ ತುಘಲಕ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಹೋಲಿಸಿದ್ದಾರೆ.

ನವದೆಹಲಿ: 14 ನೇ ಶತಮಾನದ ವಿವಾದಾತ್ಮಕ ದೆಹಲಿ ಸುಲ್ತಾನ ಮೊಹಮ್ಮದ್ ಬಿನ್ ತುಘಲಕ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಹೋಲಿಸಿದ್ದಾರೆ.
2016ರಲ್ಲಿ ಮೋದಿ ಜಾರಿಗೆ ತಂದ ನೋಟ್ ಅಮಾನ್ಯತೆ ನೀತಿಯನ್ನು ಟೀಕಿಸಿರುವ ಅಜಾದ್, ಮೋದಿಯ ತುಘಲಕ್ ನೀತಿಯಿಂದಾಗಿ ಜನ ಸಾಮಾನ್ಯರು ತೀವ್ರ ತೊಂದರೆ ಎದುರಿಸುವಂತಾಯಿತು. 500 ರೂ. ಹಾಗೂ 1 ಸಾವಿರ ನೋಟುಗಳನ್ನು ಬದಲಾಯಿಸಿ ಹೊಸ ನೋಟುಗಳನ್ನು ತಂದಿರುವುದು ತುಘಲಕ್ ನಂತಿದೆ ಎಂದು ಸುದ್ದಿಗಾರರಿಗೆ ಹೇಳಿದರು.
14ನೇ ಶತಮಾನದ ದೆಹಲಿ ಸುಲ್ತಾನ ಮೊಹಮ್ಮದ್ ತುಘಲಕ್ ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್ ಗೆ ಹಾಗೂ ದೌಲತಾಬಾದ್ ನಿಂದ ದೆಹಲಿಗೆ ಬದಲಾಯಿಸುವ ಮೂಲಕ ವಿವಾದತೀತನಾಗಿ ಪ್ರಸಿದ್ಧನಾಗಿದ್ದ.ಇದೇ ರೀತಿಯಲ್ಲಿ ಮೋದಿ ಆರ್ ಬಿ ಗೌರ್ವನರ್, ಸಂಪುಟದ ಒಪ್ಪಿಗೆ ಪಡೆಯದೆ ನೋಟ್ ಅಮಾನ್ಯತೆ ನಿರ್ಧಾರ ತೆಗೆದುಕೊಂಡಿದ್ದರು ಎಂದು ಗುಲಾಂ ನಬಿ ಅಜಾದ್ ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


