ಬಿಜೆಪಿಗೆ ರಾಜೀವ್ ಗಾಂಧಿ ಬಗ್ಗೆ ಅಪಾರ ಗೌರವವಿದೆ, ಆದರೆ ಅವರ ಸರ್ಕಾರದ ತಪ್ಪುಗಳ ಬಗ್ಗೆ ಅಲ್ಲ: ನಿರ್ಮಲಾ ಸೀತಾರಾಮನ್
ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕುರಿತು ಗೌರವವಿದೆ. ಆದರೆ ಹಾಗೆಂದು ಅವರ ಆಡಳಿತದಲ್ಲಿನ ತಪ್ಪುಗಳು ಹಾಗೂ ಅವರ ಸರ್ಕಾರದಲ್ಲಾದ ಹಗರಣದ ಬಗ್ಗೆ ....

Published On :
ವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕುರಿತು ಗೌರವವಿದೆ. ಆದರೆ ಹಾಗೆಂದು ಅವರ ಆಡಳಿತದಲ್ಲಿನ ತಪ್ಪುಗಳು ಹಾಗೂ ಅವರ ಸರ್ಕಾರದಲ್ಲಾದ ಹಗರಣದ ಬಗ್ಗೆ ಮಾತನಾಡದಿರಲು ಸಾಧ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
1980ರ ದಶಕದಲ್ಲಿ ರಾಜೀವ್ ಗಾಂಧಿಯವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೌಕಾಪಡೆಗೆ ಸೇರಿದ್ದ ವಿಶಿಷ್ಟ ವಿಮಾನವಾಹಕ ಐಎನ್ಎಸ್ ವೀರತ್ ಅನ್ನು ರಾಜೀವ್ ಕುಟುಂಬ ಅವರ ವೈಯುಕ್ತಿಕ ಟ್ಯಾಕ್ಸಿಯಂತೆ ಬಳಸಿಕೊಂಡಿದೆ ಎಂದ್ಬ ಪ್ರಧಾನಿ ತೀಕೆಗೆ ನಿರ್ಮಲಾ ಸೀತಾರಾಮನ್ ಸಹಮತ ಸೂಚಿಸಿದ್ದಾರೆ.
ಐಎನ್ಎಸ್ ವೀರತ್ ನ ಗಾಂಧಿ ಕುಟುಂ ದುರುಪಯೋಗದ ಪಡಿಸಿಕೊಂಡಿರುವ ಆರೋಪದ ವಿವರ ಸಾರ್ವಜನಿಕ ದಾಖಲೆಗಳಲ್ಲಿದೆ. 2013 ರಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಸುದ್ದಿ ನಿಯತಕಾಲಿಕೆಗಳು ಅದರ ಬಗ್ಗೆ ಬರೆದಿದ್ದಾರೆ ಎಂದು ಸಿತರಾಮನ್ ಹೇಳಿದ್ದಾರೆ. "ಐಎನ್ಎಸ್ ವೀರತ್ ಬಗ್ಗೆ ವಿವರಗಳು ಸಾರ್ವಜನಿಕ ಡೊಮೈನ್ ನಲ್ಲಿಯೂ ಸಿಗುತ್ತದೆ.ಪ್ರತಿಯೊಬ್ಬರಿಗೆ ಅದರ ಬಗ್ಗೆ ತಿಳಿದಿದೆ" ಗುರುವಾರ ಸುದ್ದಿಗಾರರೊಡನೆ ಮಾತನಾಡಿದ ಸಚಿವರು ಹೇಳಿದ್ದಾರೆ.
ಗಾಂಧಿ ಕುಟುಂಬ ಮತ್ತು ರಾಜೀವ್ ಗಾಂಧಿ ಅವರ ಸಂಬಂಧಿಗಗಳನ್ನು ಸ್ವಾಗತಿಸಲು ನೌಕಾಪಡೆಯ ಯುದ್ಧನೌಕೆಯನ್ನು ಬಲಸಿದೆ ಎಂಬ ಮೋದಿ ಹೇಳಿಕೆಗೆ ಉತ್ತರಿಸುತಾ "ನಮ್ಮ ಸಾಗರದ ಗಡಿಯನ್ನು ಭದ್ರಪಡಿಸುವುದಕ್ಕಾಗಿ ಐಎನ್ಎಸ್ ವೀರತ್ ನಿಯೋಜನೆಗೊಂಡಿತ್ತು. ಆದರೆ ರಜಾದಿನಕ್ಕೆ ಹೊರಟಿದ್ದ ಗಾಂಧಿ ಕುಟುಂಬ ಅದನ್ನು ತೆಗೆದುಕೊಂಡು ಪ್ರಯಾಣ ಬೆಳೆಸಿತ್ತು. ಐಎನ್ಎಸ್ ವೀರತ್ ತಂಡದ ಸದಸ್ಯರು ರಾಜೀವ್ ಗಾಂಧಿ ಹಾಗೂ ಅವರ ಕುಟುಂಬ ಸದಸ್ಯರು ಯುದ್ಧನೌಕೆಯನ್ನು ಖಾಸಗಿ ಉದ್ದೇಶಕ್ಕೆ ಬಳಸಿಕೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ" ಎಂದು ಸಿತರಾಮನ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಈ ಹಿಂದೆ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದಿರುವ ರಕ್ಷಣಾ ಸಚಿವೆ ಈಗ ಮಾತ್ರ ಬಿಜೆಪಿಯನ್ನು ಹಳಿಯಲು ಕಾಂಗ್ರೆಸ್ ಇದೇ ಸೇನಾಪಡೆಯ ವಿಚಾರವನ್ನೆತ್ತಿಕೊಂಡಿದೆ ಎಂದರು.
"ರಾಜೀವ್ ಗಾಂಧಿಯವರಿಗೆ ನಾವು ಸಂಪೂರ್ಣ ಗೌರವವನ್ನು ನೀಡುತ್ತೇವೆ, ಆದರೆ ಇದರರ್ಥ ನಾವು ಅವರ ಸರಕಾರದ ತಪ್ಪುನೀತಿಗಳನ್ನು, ಭ್ರಷ್ಟಾಚಾರವನ್ನು ಸಹ ಒಪ್ಪಿಕೊಳ್ಳುತ್ತೇವೆ ಅದರ ಬಗ್ಗೆ ಮಾತನಾಡುವುದಿಲ್ಲ ಎಂದಲ್ಲ. ಭೋಪಾಲ್ ಅನಿಲ ದುರಂತದಲ್ಲಿ ಪ್ರಧಾನ ಆರೋಪಿಯಾಗಿರುವ ವಾರೆನ್ ಆಂಡರ್ಸನ್ (ಯೂನಿಯನ್ ಕಾರ್ಬೈಡ್ ಸಿಇಓ) ನ ಬಿಡುಗಡೆ ಬಗ್ಗೆ ಮಾತನಾಡಿದಾಗ ರಾಜೀವ್ ಗಾಂಧಿ ಸರ್ಕಾರದ ಉಲ್ಲೇಖ ಅನಿವಾರ್ಯ.ಇದರಲ್ಲಿ ತಪ್ಪೇನು?" ಅವರು ಪ್ರಶ್ನಿಸಿದ್ದಾರೆ.
1984 ರಿಂದ 1989 ರವರೆಗೆ ರಾಜೀವ್ ಗಾಂಧಿಯವರು ಭಾರತದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


