ದೇಶ

15 ವರ್ಷದ ಕ್ರಿಕೆಟ್ ವೃತ್ತಿಗಿಂತ ಆ 15 ಗಂಟೆಗಳಲ್ಲಿ ಕೇಳಿದ ಆರೋಪಗಳಿಂದ ಕಂಗಾಲಾದೆ: ಗಂಭೀರ್

ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿ ಬಿಜೆಪಿ ಸೇರಿ ಪೂರ್ವ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಗೌತಮ್ ಗಂಭೀರ್ ಅವರು ತಮ್ಮ 15 ವರ್ಷಗಳ ಕ್ರಿಕೆಟ್ ಬದುಕಿಗಿಂತ ರಾಜಕೀಯಕ್ಕೆ ಪಾದಾರ್ಪಣೆ...

15 ವರ್ಷದ ಕ್ರಿಕೆಟ್ ವೃತ್ತಿಗಿಂತ ಆ 15 ಗಂಟೆಗಳಲ್ಲಿ ಕೇಳಿದ ಆರೋಪಗಳಿಂದ ಕಂಗಾಲಾದೆ: ಗಂಭೀರ್
ಗೌತಮ್ ಗಂಭೀರ್
Published On :
ನವದೆಹಲಿ: ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿ ಬಿಜೆಪಿ ಸೇರಿ ಪೂರ್ವ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಗೌತಮ್ ಗಂಭೀರ್ ಅವರು ತಮ್ಮ 15 ವರ್ಷಗಳ ಕ್ರಿಕೆಟ್ ಬದುಕಿಗಿಂತ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ 15 ಗಂಟೆಗಳಲ್ಲಿ ಹಲವು ಆರೋಪಗಳನ್ನು ಎದುರಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಪ್ ಮುಖಂಡರು ನನ್ನ ನಾಮಪತ್ರ ರದ್ದು ಮಾಡಿ ಎಂದರು. ನನ್ನ ಬಳಿ ಎರಡು ವೋಟರ್ ಐಡಿ ಇದೆ ಎಂದರು. ನನ್ನ ಮೇಲೆ ಎಫ್ಐಈರ್ ದಾಖಲಾಗಿದೆ ಎಂದರು. ಇದೇ ಅಲ್ಲದೆ ನಾನು 240 ದಿನಗಳು ವಿದೇಶದಲ್ಲಿರುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು ಎಂದು ಗಂಭೀರ್ ಚುನಾವಣಾ ಸಭೆಯಲ್ಲಿ ಹೇಳಿಕೊಂಡಿದ್ದಾರೆ.
ಕೇಜ್ರಿವಾಲ್ ನಾನು ಬಹಿರಂಗ ಚರ್ಚೆಗೆ ಹೆದರುತ್ತೇನೆ ಎನ್ನುತ್ತಾರೆ. ಪಾಕಿಸ್ತಾನಕ್ಕೆ ಹೆದರದ ನಾನು ಚರ್ಚೆಗೇಕೆ ಹೆದರಲಿ. ನನ್ನೊಂದಿಗೆ ಅರ್ಥ ಗಂಟೆ ಚರ್ಚೆ ಮಾಡಿ, ಸ್ಥಳ ಹಾಗೂ ಸಮಯ ನೀವೇ ನಿಗದಿ ಮಾಡಿ ಎಂದು ಕೇಜ್ರಿವಾಲ್ ಗೆ ಸವಾಲು ಹಾಕಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.