ದೇಶ

ನನಗೀಗಲೂ ಮೋದಿ ಬಗ್ಗೆ ಪ್ರೀತಿ ಇದೆ: ಪ್ರಧಾನಿಯವರ ರಾಜೀವ್ ಗಾಂಧಿ ಹೇಳಿಕೆಗೆ ರಾಹುಲ್ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ನನ್ನ ತಂದೆ, ದಿವಂಗತ ರಾಜೀವ್ ಗಾಂಧಿಯವರನ್ನು ತೆಗಳಿದರೂ ಸಹ ನನಗೆ ಮೋದಿಯವರ ಬಗೆಗೆ ಪ್ರೀತಿಯಷ್ಟೇ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನನಗೀಗಲೂ ಮೋದಿ ಬಗ್ಗೆ ಪ್ರೀತಿ ಇದೆ: ಪ್ರಧಾನಿಯವರ ರಾಜೀವ್ ಗಾಂಧಿ ಹೇಳಿಕೆಗೆ ರಾಹುಲ್ ಪ್ರತಿಕ್ರಿಯೆ
ರಾಹುಲ್ ಗಾಂಧಿ
Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನನ್ನ ತಂದೆ, ದಿವಂಗತ ರಾಜೀವ್ ಗಾಂಧಿಯವರನ್ನು ತೆಗಳಿದರೂ ಸಹ ನನಗೆ ಮೋದಿಯವರ ಬಗೆಗೆ ಪ್ರೀತಿಯಷ್ಟೇ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ದೆಹಲಿಯ ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದ ಸಾರ್ವಜನಿಕ ಸಭೆಯಲ್ಲಿ ಗಾಂಧಿ ಮಾತನಾಡುತ್ತಿದ್ದರು.

"ನರೇಂದ್ರ ಮೋದಿ ನನ್ನ ಕುಟುಂಬದ ಬಗೆಗೆ ಎಷ್ಟು ಹಗೆತನವನ್ನು ಹೊಂದಿದ್ದಾರೆ, ಆದರೆ ನಾನು ಅವರ ಬಗೆಗೆ ಕೇವಲ ಪ್ರೀತಿಯನ್ನಷ್ಟೇ ಹೊಂದಿದ್ದೇನೆ. ಅವರು ನನ್ನ ತಂದೆ ಹುತಾತ್ಮ ರಾಜೀವ್ ಗಾಂಧಿಯವರನ್ನು ಅವಮಾನಿಸಿದ್ದಾರೆ.  ಆದರೂ ನಾನವರನ್ನು ಪ್ರೀತಿಸುತ್ತೇನೆ" ರಾಹುಲ್ ಹೇಳಿದ್ದಾರೆ.

ಶನಿವಾರ ಉತ್ತರ ಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

"ನಿಮ್ಮ ತಂದೆ ಸಾರ್ವಜನಿಕ ವಲಯದಲ್ಲಿ ಮಿಸ್ಟರ್ ಕ್ಲೀನ್ ಎಂದು ಕರೆಯಲ್ಪಟ್ಟಿದ್ದರೂ ಸಹ  ಅವರ ಜೀವನ ಅಂತ್ಯದ ವೇಳೆಗೆ ಅವರು ನಂಬರ್ 1 ಭ್ರಷ್ಟಾಚಾರಿಯಾಗಿ ಸಾವನ್ನಪ್ಪಿದ್ದರು" ಮೋದಿ ಹೇಳಿದ್ದದ್ದು ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಸೋಮವಾರದ ರ್ಯಾಲಿಗಳಲ್ಲಿ ಸಹ ನರೇಂದ್ರ ಮೋದಿ ರಾಜೀವ್ ಗಾಂಧಿ ಕುರಿತು ಹೇಳಿದ್ದು ಬೋಫೋರ್ಸ್ ಹಗರಣದ ರೂವಾರಿಗಳಾಗಿದ್ದ ರಾಜೀವ್ ಗಾಂಧಿ ಹೆಸರಲ್ಲಿ ಕಾಂಗ್ರೆಸ್ ಮತಯಾಚನೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ರ್ಯಾಲಿಯಲ್ಲಿ ಕಾಂಗ್ರೆಸ್ ನ ಉದ್ದೇಶಿತ ಕನಿಷ್ಟ ಆದಾಯ ಯೋಜನೆ "ನ್ಯಾಯ್" ಬಗೆಗೆ ಮಾತನಾಡಿದ ರಾಹುಲ್ ಗಾಂಧಿ  ದೇಶದ ಆರ್ಥಿಕತೆಯ ಬಲವನ್ನು ಈ ಯೋಜನೆ ಹೆಚ್ಚಿಸಲಿದೆ ಎಂದರು. "ನ್ಯಾಯ್ ಯೋಜನೆಯಿಂದಾಗಿ ದೆಹಲಿ ಹಾಗೂ ದೇಶದ ಆರ್ಥಿಕತೆ ವೃದ್ದಿಸಲಿದೆ" ಅವರು ಹೇಳಿದ್ದಾರೆ.

ದೆಹಲಿ ಲೋಕಸಭಾ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.