ಮೋದಿ 180 ಡಿಗ್ರಿ ಪ್ರಧಾನಿ, ಅವರು ಹೇಳುವುದು ಒಂದು, ಮಾಡುವುದು ಇನ್ನೊಂದು: ಅಖಿಲೇಶ್ ಯಾದವ್
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋಲಲಿದ್ದು, ಎಸ್ಪಿ,ಬಿಎಸ್ಪಿ ಮತ್ತು ಆರ್ ಎಲ್ ...

Published On :
ಲಕ್ನೊ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋಲಲಿದ್ದು, ಎಸ್ಪಿ,ಬಿಎಸ್ಪಿ ಮತ್ತು ಆರ್ ಎಲ್ ಡಿಯಲ್ಲಿ ಸರ್ಕಾರ ರಚಿಸಿ ಪ್ರಧಾನಿ ಯಾರಾಗುತ್ತಾರೆಂದು ತೀರ್ಮಾನಿಸಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಇಂದು ಲಕ್ನೊದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಇದುವರೆಗಿನ ಹಂತಗಳ ಮತದಾನದಲ್ಲಿ ಬಿಜೆಪಿ ಹಿಂದೆ ಬಿದ್ದಿದೆ ಎಂದು ಗೊತ್ತಾದ ಬಳಿಕ ಪ್ರಧಾನ ಮಂತ್ರಿಯವರ ಭಾಷೆಯೇ ಬದಲಾಗಿದೆ. ಬಿಜೆಪಿಗೆ ಇಂದು ಬೇರೆ ಮಾರ್ಗವೇ ಇಲ್ಲದಾಗಿದೆ. ಪ್ರಧಾನಿಯಿಂದ ಹಿಡಿದ ಬಿಜೆಪಿಯ ಯಾವುದೇ ನಾಯಕರು ದೇಶದ ಅಭಿವೃದ್ಧಿ, ರೈತರ ಆದಾಯಗಳ ಬಗ್ಗೆ ಮಾತನಾಡುವುದಿಲ್ಲ. ಮೋದಿಯವರು ದೇಶದ ಜನರನ್ನು ಹಾದಿ ತಪ್ಪಿಸಲು ಬಯಸುತ್ತಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಸೋಲಲಿದ್ದು ಪ್ರಧಾನಿ ಯಾರಾಗುತ್ತಾರೆಂದು ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಆರ್ ಎಲ್ ಡಿ ತೀರ್ಮಾನಿಸಲಿದೆ ಎಂದರು.
ಮೋದಿಯವರು 180 ಡಿಗ್ರಿ ಪ್ರಧಾನಿ. ಅವರು ಏನು ಹೇಳುತ್ತಾರೆಯೋ ಅದಕ್ಕೆ ಸರಿ ವಿರುದ್ಧವಾಗಿ ಮಾಡುತ್ತಾರೆ. ಕೇಲವ 1 ಶೇಕಡಾ ಜನಸಂಖ್ಯೆಗೆ ಮಾತ್ರ ಅವರು ಪ್ರಧಾನ ಮಂತ್ರಿ. ಸಾಮಾಜಿಕ ನ್ಯಾಯದ ಕಡೆಗೆ ದೇಶವನ್ನು ಕೊಂಡೊಯ್ಯುವವರ ಬಗ್ಗೆ ಮೋದಿ ತಲೆಕೆಡಿಸಿಕೊಂಡಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬಿಜೆಪಿPM Narendra Modiಚುನಾವಣೆಸರ್ಕಾರPrime MinisterElectionAkhilesh Yadavಅಖಿಲೇಶ್ ಯಾದವ್ಪಿಎಂ ನರೇಂದ್ರ ಮೋದಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


