ನಿಮಗೆ ದ್ರೋಹ ಮಾಡಿದ ಮೋದಿಯನ್ನು ಮರೆಯದಿರಿ: ಆಂಧ್ರ ಜನತೆಗೆ ಕೇಜ್ರಿವಾಲ್ ಮನವಿ
ನೂತನ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ನಿಮಗೆ ದ್ರೋಹ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾವುದೇ ಕಾರಣಕ್ಕೂ ಮರೆಬೇಡಿ....

Published On :
ಅಮರಾವತಿ: ನೂತನ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ನಿಮಗೆ ದ್ರೋಹ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾವುದೇ ಕಾರಣಕ್ಕೂ ಮರೆಬೇಡಿ ಮತ್ತು ಈ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಂಧ್ರ ಪ್ರದೇಶ ಜನತೆಗೆ ಮನವಿ ಮಾಡಿದ್ದಾರೆ.
ಇಂದು ಅಮರಾವತಿಯಲ್ಲಿ ಡಿಟಿಪಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಕೇಜ್ರಿವಾಲ್, ಈ ಬಾರಿಯ ಚುನಾವಣೆ ಆಂಧ್ರ ಹಾಗೂ ದೇಶ ಎರಡಕ್ಕೂ ಬಹಳ ಮುಖ್ಯವಾದದ್ದು. ಚಂದ್ರಬಾಬು ನಾಯ್ಡು ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ. ಆಂಧ್ರಪ್ರದೇಶ ವಿಭಜನೆ ನಂತರ ಬಹಳ ದೊಡ್ಡ ಸವಾಲಿತ್ತು. ನಾಯ್ಡು ಅವರು ಆ ಸವಾಲನ್ನು ಸಮರ್ಥವಾಗಿ ಎದುರಿಸಿದರು ಎಂದರು.
ದೇಶದಲ್ಲಿ ತುರ್ತು ಪರಿಸ್ಥಿತಿಯಂಥ ಸನ್ನಿವೇಶ ನಿರ್ಮಾಣವಾಗಿದ್ದು, ನರೇಂದ್ರ ಮೋದಿ- ಅಮಿತ್ ಶಾ ಜೋಡಿ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನೇ ನಾಶ ಮಾಡಿದೆ. ಕಳೆದ ಎಪ್ಪತ್ತು ವರ್ಷಗಳಲ್ಲೇ ಮೋದಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಆಪ್ ನಾಯಕ ಆರೋಪಿಸಿದ್ದಾರೆ.
ಮೋದಿ ಯಾರ ಮಾತು ಕೇಳಿಸಿಕೊಳ್ಳಲ್ಲ. ಅಧಿಕಾರಿಗಳ ಮಾತು ಕೇಳಿಸಿಕೊಳ್ಳಲ್ಲ. ಹಾಗೆ ಕೇಳಿಸಿಕೊಳ್ಳುವ ಏಕೈಕ ವ್ಯಕ್ತಿ ಅಮಿತ್ ಶಾ. ಯಾರ ಜತೆಗೂ ಚರ್ಚಿಸದೆ ಅಪನಗದೀಕರಣ ಜಾರಿಗೆ ತಂದರು. ಅದು ಅತಿ ದೊಡ್ಡ ಹಗರಣ. ಪ್ರತಿ ವ್ಯಾಪಾರಿ, ಮಧ್ಯಮ ವರ್ಗ, ಬಡವರು ಅದರಿಂದ ಅನುಭವಿಸಿದರು. ಧರ್ಮ, ಜಾತಿ, ಜನಾಂಗದ ಹೆಸರಲ್ಲಿ ಮೋದಿಯು ಜನರನ್ನು ವಿಭಜಿಸಿದರು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ಬಾರಿ ಮೋದಿ-ಶಾ ಜಯಿಸಿಬಿಟ್ಟರೆ ಜರ್ಮನಿಯಲ್ಲಿ ಹಿಟ್ಲರ್ ಮಾಡಿದಂತೆ ಇವರು ದೇಶದ ಸಂವಿಧಾನವನ್ನೇ ಬದಲಿಸುತ್ತಾರೆ. ಹಿಂದೂ ದೇಶವಾಗಿ ಬದಲಿಸುತ್ತಾರೆ. ಇದೇ ದೇಶದಲ್ಲಿ ಕೊನೆ ಚುನಾವಣೆ ಎಂದು ಬಿಜೆಪಿ ಸಂಸದರಾದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಮುಂದೆ 2050ರ ತನಕ ಚುನಾವಣೆ ಇರುವುದಿಲ್ಲ ಎಂದಿದ್ದಾರೆ ಎಂದು ಕೇಜ್ರಿವಾಲ್ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


