ದೇಶ

ಬಿಜೆಪಿ ಸೇರಿದ ಪ್ಯಾರಾಲಂಪಿಕ್ ಕ್ರೀಡಾಪಟು ದೀಪಾ ಮಲಿಕ್

ಪ್ಯಾರಾಒಲಂಪಿಕ್ ಕ್ರೀಡಾಕೂಟದಲ್ಲಿ ಪ್ರಥಮ ಬಾರಿಗೆ ಪದಕ ವಿಜೇತೆಯಾಗಿದ್ದ ದೀಪಾ ಮಲಿಕ್ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಸೇರಿದ ಪ್ಯಾರಾಲಂಪಿಕ್ ಕ್ರೀಡಾಪಟು ದೀಪಾ ಮಲಿಕ್
ದೀಪಾ ಮಲಿಕ್
Published On :
ನವದೆಹಲಿ: ಪ್ಯಾರಾಒಲಂಪಿಕ್ ಕ್ರೀಡಾಕೂಟದಲ್ಲಿ ಪ್ರಥಮ ಬಾರಿಗೆ ಪದಕ ವಿಜೇತೆಯಾಗಿದ್ದ ದೀಪಾ ಮಲಿಕ್ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ. 

ಹರಿಯಾಣದ ಬಿಜೆಪಿ ಘಟಕದ ಮುಖ್ಯಸ್ಥ ಸುಬಾಷ್ ಬರಾಲಾ ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ಸೋಮವಾರ ಮಲಿಕ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

"ಮಹಿಳೆಯರ ಅಭಿವೃದ್ದಿಗೆ ಮೋದಿ ಬಹಳ ಕೆಲಸ ಮಾಡಿದ್ದಾರೆ, ಮಹಿಳಾ ಪರ ಕಾಳಜಿ ಹೊಂದಿರುವ ಪ್ರಧಾನಿ ಮೋದಿಯವರನ್ನು ನಾನು ಬೆಂಬಲಿಸುತ್ತೇನೆ. ವಿಶೇಷ ಚೇತನರ ಅಭಿವೃದ್ದಿಗಾಗಿ ಸಹ ಪ್ರಧಾನಿ ಉತ್ತಮ ಕೆಲಸ ಮಾಡಿದ್ದಾರೆ." ದೀಪಾ ಮಲಿಕ್ ಎ.ಎನ್.ಐ. ಸುದ್ದಿಸಂಸ್ಥೆಗೆ ವಿವರಿಸಿದ್ದಾರೆ.

ದೀಪಾ ಅವರಿಗೆ ಸ್ವಾಗತವಿದೆ, ಅವರ ಸೇರ್ಪಡೆಯು ಪಕ್ಷ ಸಂಘಟನೆಗೆ ಬಲ ನೀಡಲಿದೆ.ಅವರು ದೇಶದ ಯುವ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಬಿಜೆಪ್ಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.