ದೇಶ

ಕೇರಳ: ಬಿಜೆಪಿಯ ಕೆ ಸುರೇಂದ್ರನ್ ಗೆ ಪಟ್ಟಣಂತಿಟ್ಟ ಟಿಕೆಟ್

ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಬಿಜೆಪಿಯ ಹಲವು ನಾಯಕರು ಸ್ಪರ್ಧಿಸಲು ಬಯಸಿದ್ದ ಕೇರಳದ ಪಟ್ಟಣಂತಿಟ್ಟ ಲೋಕಸಭಾ ಕ್ಷೇತ್ರದ ಟಿಕೆಟ್ ಆರ್ ಎಸ್ ಎಸ್ ಹಿನ್ನೆಲೆಯ ಕೆ ಸುರೇಂದ್ರನ್ ಪಾಲಾಗಿದೆ.

ಕೇರಳ: ಬಿಜೆಪಿಯ ಕೆ ಸುರೇಂದ್ರನ್ ಗೆ ಪಟ್ಟಣಂತಿಟ್ಟ ಟಿಕೆಟ್
ಸುರೇಂದ್ರನ್
Published On :

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಬಿಜೆಪಿಯ ಹಲವು ನಾಯಕರು ಸ್ಪರ್ಧಿಸಲು ಬಯಸಿದ್ದ ಕೇರಳದ ಪಟ್ಟಣಂತಿಟ್ಟ ಲೋಕಸಭಾ ಕ್ಷೇತ್ರದ ಟಿಕೆಟ್ ಆರ್ ಎಸ್ ಎಸ್ ಹಿನ್ನೆಲೆಯ ಕೆ ಸುರೇಂದ್ರನ್ ಪಾಲಾಗಿದೆ.

ಬಿಜೆಪಿಯು ಶನಿವಾರ ಬಿಡುಗಡೆಗೊಳಿಸಿರುವ ಅಭ್ಯರ್ಥಿಗಳ ನೂತನ ಪಟ್ಟಿಯಲ್ಲಿ ಸುರೇಂದ್ರನ್ ಹೆಸರನ್ನು ಪ್ರಕಟಿಸಲಾಗಿದೆ.ಪ್ರಖ್ಯಾತ ಶಬರಿಮಲೆ ದೇವಾಲಯವಿರುವ ಕೇಂದ್ರ ಸ್ಥಳ ಪಟ್ಟಣಂತಿಟ್ಟದಿಂದ ಸ್ಪರ್ಧಿಸಲು ಇದೊಂದು ಉತ್ತಮ ಅವಕಾಶ ಎಂದು ಪಕ್ಷ ಪರಿಗಣಿಸಿದೆ.

ಕೇರಳ ಬಿಜೆಪಿ ಘಟಕದ ಅಧ್ಯಕ್ಷ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪರಮಾಪ್ತ ಪಿ.ಎಸ್. ಶ್ರೀಧರನ್ ಪಿಳ್ಳೈ ಕೂಡ ಪಟ್ಟಣಂತಿಟ್ಟ ಸ್ಪರ್ಧಾಕಾಂಕ್ಷಿಯಾಗಿದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ರಾಜಕೀಯ ವೃತ್ತಿ ಜೀವನ ಆರಂಭಿಸಿದ ಸುರೇಂದ್ರನ್, ಶಬರಿ ಮಲೆ ವಿವಾದದ ವೇಳೆ ಗುರುತಿಸಿಕೊಂಡಿದ್ದರು. 50 ವರ್ಷದೊಳಗಿನ, ಮಾಸಿಕ ಋತುಸ್ರಾವವಾಗುತ್ತಿರುವ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪನ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸದಂತೆ ನಡೆದ ಪ್ರತಿಭಟನೆಯಲ್ಲಿ ಬಂಧಿತರಾಗಿದ್ದರು.

ಭಾರತೀಯ ಜನತಾ ಪಕ್ಷ ಶನಿವಾರ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ, ಪಶ್ಚಿಮ ಬಂಗಾಳದ ಜಂಗೀಪುರ ಲೋಕಸಭಾ ಕ್ಷೇತ್ರದಿಂದ ಮಫುಜಾ ಖಾತುನ್, ಉತ್ತರ ಪ್ರದೇಶದ ಕೈರಾನ ಕ್ಷೇತ್ರಕ್ಕೆ ಪ್ರದೀಪ್ ಚೌಧರಿ, ನಾಗಿನ ಎಸ್ ಸಿ ಮೀಸಲು ಕ್ಷೇತ್ರಕ್ಕೆ ಡಾ. ಯಶ್ವಂತ್, ಬುಲಂದ್ ಶಹರ್ ಎಸ್ ಸಿ ಮೀಸಲು ಕ್ಷೇತ್ರಕ್ಕೆ ಭೋಲಾ ಸಿಂಗ್ ಹೆಸರು ಘೋಷಿಸಲಾಗಿದೆ.
ಅಲ್ಲದೆ ಹೈದರಾಬಾದ್ ನಿಂದ ಡಾ. ಭಗವಂತ್ ರಾವ್ ಸೇರಿದಂತೆ ತೆಲಂಗಾಣದ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.