ಕೆಲಸ ಮಾಡ್ಲಿಲ್ಲ ಅಂದ್ರೆ ನನ್ನ ಮಗನ ಬಟ್ಟೆ ಹರಿಯಿರಿ: ಕಮಲ್ ನಾಥ್
ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಿರುವ ಮಧ್ಯಪ್ರದೇಶ ಸಿಎಂ ಕಮಲ್ ನಾಥ್, ನೀಡಿದ ಭರವಸೆಗಳನ್ನು ಈಡೇರಿಸದೇ ಇದ್ದರೆ ತಮ್ಮ ಪುತ್ರನ ಬಟ್ಟೆ ಹರಿಯಿರಿ ಎಂದು ಜನತೆಗೆ ಹೇಳಿದ್ದಾರೆ.

Published On :
ಛಿಂದ್ವಾರ: ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಿರುವ ಮಧ್ಯಪ್ರದೇಶ ಸಿಎಂ ಕಮಲ್ ನಾಥ್, ನೀಡಿದ ಭರವಸೆಗಳನ್ನು ಈಡೇರಿಸದೇ ಇದ್ದರೆ ತಮ್ಮ ಪುತ್ರನ ಬಟ್ಟೆ ಹರಿಯಿರಿ ಎಂದು ಜನತೆಗೆ ಹೇಳಿದ್ದಾರೆ.
ಕ್ಷೇತ್ರದೊಂದಿಗೆ ತಮಗಿರುವ 40 ವರ್ಷಗಳ ನಂಟನ್ನು ಚುನಾವಣಾ ಪ್ರಚಾರದಲ್ಲಿ ಉಲ್ಲೇಖಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ಛಿಂದ್ವಾರ ಲೋಕಸಭಾ ಕ್ಷೇತ್ರದ ಜನತೆಯ ಸೇವೆಯ ಕೆಲಸವನ್ನು ಈಗ ತಮ್ಮ ಮಗ ನಕುಲ್ ಗೆ ವಹಿಸುತ್ತಿದ್ದು ತಾವು ಮಧ್ಯಪ್ರದೇಶದತ್ತ ಪೂರ್ತಿ ಗಮನಗರಿಸಬಹುದಾಗಿ ಹೇಳಿದ್ದಾರೆ.
ಕ್ಷೇತ್ರದ ಜನತೆಯ ಸೇವೆ ಮಾಡುವ ಜವಾಬ್ದಾರಿಯನ್ನು ನಾನು ನಕುಲ್ ಗೆ ವಹಿಸುತ್ತಿದ್ದೇನೆ. ಒಂದು ವೇಳೆ ಆತ ಕೆಲಸ ಮಾಡದೇ, ಭರವಸೆಗಳನ್ನು ಈಡೇರಿಸದೇ ಇದ್ದರೆ ಬಟ್ಟೆ ಹರಿಯಿರಿ, ಆತನನ್ನು ಪ್ರಶ್ನೆ ಮಾಡಿ ಎಂದು ಜನತೆಗೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಧ್ಯಪ್ರದೇಶMadhyapradeshKamal nathಕಮಲ್ ನಾಥ್ChhindwaraLok Sabha Elections 2019ಲೋಕಸಭಾ ಚುನಾವಣೆ 2019ಛಿಂದ್ವಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


