ಅಭಿನಂದನ್ ವರ್ಧಮಾನ್‍ರನ್ನು ಬಿಡುಗಡೆ ಮಾಡದಿದ್ದಿದ್ರೆ ಅದು ಪಾಕ್‌ಗೆ ಸಾವಿನ ರಾತ್ರಿಯಾಗಿರುತ್ತಿತ್ತು: ಪ್ರಧಾನಿ ಮೋದಿ
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದಿದ್ರೆ ಅದು ಪಾಕಿಸ್ತಾನಕ್ಕೆ ಸಾವಿನ ರಾತ್ರಿಯಾಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Published On :
ಅಹಮದಾಬಾದ್: ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದಿದ್ರೆ ಅದು ಪಾಕಿಸ್ತಾನಕ್ಕೆ ಸಾವಿನ ರಾತ್ರಿಯಾಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಭಿನಂದನ್ ಪಾಕಿಸ್ತಾನದಿಂದ ವಾಪಸ್ ಆದ ಪ್ರಕ್ರಿಯೆಯ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ನಮ್ಮ ಪೈಲಟ್ ಗೆ ಏನಾದರೂ ಆದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದೆವು.
ಅಭಿನಂದನ್ ಗೆ ಏನಾದರು ಆದಲ್ಲಿ ಮೋದಿ ನಮಗೆ ಹೀಗೆ ಮಾಡಿದರು ಎಂದು ಇಡೀ ಪ್ರಪಂಚದ ಮುಂದೆ ನೀವು ಹೇಳುತ್ತಲೇ ಇರಬೇಕು ಹಾಗೆ ಮಾಡುತ್ತೇವೆ ಎಂದು ನಾವು ಎಚ್ಚರಿಸಿದ್ದೆವು ಎಂದು ಮೋದಿ ಹೇಳಿದ್ದಾರೆ.
ಅಭಿನಂದನ್ ಪಾಕ್ ವಶದಲ್ಲಿದ್ದಾಗ ಮೋದಿ 12 ಕ್ಷಿಪಣಿಗಳನ್ನು ಸಿದ್ಧಗೊಳಿಸಿದ್ದರು. ಎರಡನೇ ದಿನಕ್ಕೇ ಪಾಕಿಸ್ತಾನ ಅಭಿನಂದನ್ ಬಿಡುಗಡೆಯನ್ನು ಘೋಷಿಸಿತ್ತು. ಇಲ್ಲವಾದಲ್ಲಿ ಆ ರಾತ್ರಿ "ರಕ್ತಪಾತದ ರಾತ್ರಿಯಾಗಿರುತ್ತಿತ್ತು" ಎಂದು ಅಮೆರಿಕದ ಹಿರಿಒಯ ಅಧಿಕಾರಿಗಳಲ್ಲೊಬ್ಬರು ಹೇಳಿದ್ದರು. ಇದನ್ನು ಹೇಳಿದ್ದು ಅಮೆರಿಕ, ಈಗ ಈ ಬಗ್ಗೆ ನಾನೇನು ಹೇಳುವುದಕ್ಕಿಲ್ಲ. ಸಮಯ ಬಂದಾಗ ನಾನು ಈ ಬಗ್ಗೆ ಮಾತನಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿPakistanterroristsಪಾಕಿಸ್ತಾನTerrorismಭಯೋತ್ಪಾದನೆಭಯೋತ್ಪಾದಕರುAbhinandan Varthamanಅಭಿನಂದನ್ ವರ್ಧಮಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


