ಕಳೆದ ಒಂದು ತಿಂಗಳಲ್ಲಿ ಮೋದಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆಯಲ್ಲಿ ಇಳಿಕೆ!
ಬಿಜೆಪಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ ಕಳೆದ ಒಂದು ತಿಂಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಸಿ-ವೋಟರ್-ಐಎಎನ್ಎಸ್ ಸಮೀಕ್ಷೆ ಹೇಳಿದೆ.

Published On :
ನವದೆಹಲಿ: ಬಿಜೆಪಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ ಕಳೆದ ಒಂದು ತಿಂಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಸಿ-ವೋಟರ್-ಐಎಎನ್ಎಸ್ ಸಮೀಕ್ಷೆ ಹೇಳಿದೆ.
ಬಾಲಾಕೋಟ್ ವೈಮಾನಿಕ ದಾಳಿ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅನುಮೋದಿಸುವವರ ಪ್ರಮಾಣ ಶೇ.62.06 ರಷ್ಟಿತ್ತು ಆದರೆ ಮಾ,12 ರಿಂದ ಏ.12 ವರೆಗೆ ಮೋದಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ 12 ಅಂಕಗಳಷ್ಟು ಕಡಿಮೆಯಾಗಿದೆ ಎಂದು ಸಿ-ವೋಟರ್-ಐಎಎನ್ಎಸ್ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ ಮಾ.22 ವರೆಗೆ 50 ರಷ್ಟಿತ್ತು. ಆದರೆ ಏ.12 ಅಂದರೆ 91 ಕ್ಷೇತ್ರಗಳಿಗೆ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದ ಬಳಿಕ ಶೇ.43.25 ಕ್ಕೆ ಕುಸಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


