ಲೈಲಾ-ಮಜ್ನುಗಿಂತ ಪ್ರಧಾನಿ ಮೋದಿ-ನಿತೀಶ್ ಕುಮಾರ್ ಸ್ಟ್ರಾಂಗ್ ಜೋಡಿಯಂತೆ!
ಪ್ರಧಾನಿ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರದ್ದು ಲೈಲಾ ಮಜ್ನುಗಿಂತಲೂ ಸ್ಟ್ರಾಂಗ್ ಜೋಡಿ ಎಂದು ಎಐಎಂಎಂ ನಾಯಕ ಅಸಾವುದ್ದೀನ್ ಒವೈಸಿ ಲೇವಡಿ ಮಾಡಿದ್ದಾರೆ.

Published On :
ನವದೆಹಲಿ: ಪ್ರಧಾನಿ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರದ್ದು ಲೈಲಾ ಮಜ್ನುಗಿಂತಲೂ ಸ್ಟ್ರಾಂಗ್ ಜೋಡಿ ಎಂದು ಎಐಎಂಎಂ ನಾಯಕ ಅಸಾವುದ್ದೀನ್ ಒವೈಸಿ ಲೇವಡಿ ಮಾಡಿದ್ದಾರೆ.
ಹೈದರಾಬಾದ್ ನಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿರುವ ಒವೈಸಿ ಇಬ್ಬರ ಪ್ರೀತಿ ಲೈಲಾ ಮಜ್ನುಗಿಂತಲೂ ಸ್ಟ್ರಾಂಗ್ ಆಗಿದೆ. ಇಬ್ಬರೂ ಎಂಥಾ ಜೋಡಿ ಎಂದರೆ ಲೈಲಾ ಮಜ್ನುಗಿಂತಲೂ ಸ್ಟ್ರಾಂಗ್. ಇವರಿಬ್ಬರೂ ಜತೆ ಸೇರಿದರೆ ದೇಶದಲ್ಲಿ ಕೋಮು ಸೌಹಾರ್ದ ಮುರಿಯುತ್ತಾರೆ ಎಂದೇ ಅರ್ಥ. ಒಂದು ವೇಳೆ ಈ ಇಬ್ಬರ ಲವ್ ಸ್ಟೋರಿ ಬರೆದರೆ, ಯಾರು ಲೈಲಾ ಯಾರು ಮಜ್ನು ಎಂದು ಮಾತ್ರ ಕೇಳಬೇಡಿ. ಈ ಬಗ್ಗೆ ನೀವೆ ನಿರ್ಧರಿಸಿ..ಕೊಳ್ಳಿ, ಎಂದು ಒವೈಸಿ ವ್ಯಂಗ್ಯ ಮಾಡಿದ್ದಾರೆ.
ಇನ್ನು ಈ ಹಿಂದೆ ಪ್ರಧಾನಿ ಮೋದಿಯನ್ನು ಸುಳ್ಳುಗಳ ಫ್ಯಾಕ್ಟರಿ ಎಂದು ಒವೈಸಿ ಟೀಕಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhiನಿತೀಶ್ ಕುಮಾರ್Nitish KumarPM Modiಪ್ರಧಾನಿ ಮೋದಿAsaduddin Owaisiಅಸಾದುದ್ದೀನ್ ಒವೈಸಿಲೋಕಸಭಾ ಚುನಾವಣೆ 2019Loksabha Election 2019Laila And Majnuಲೈಲಾ ಮಜ್ನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


