'ಪ್ರಾಮಾಣಿಕ ಚೌಕಿದಾರ್' ಮತ್ತು 'ಭ್ರಷ್ಟ ನಾಮ್ದಾರ್' ಮಧ್ಯೆ ಯಾರು ಬೇಕೆಂದು ನೀವೇ ನಿರ್ಧರಿಸಿ:ಪ್ರಧಾನಿ ನರೇಂದ್ರ ಮೋದಿ
ಇಮಾಂದಾರ್ ಚೌಕಿದಾರ್ ಮತ್ತು ಭ್ರಷ್ಟಾಚಾರಿ ನಾಮ್ದಾರ್ ಮಧ್ಯೆ ಯಾರು ಬೇಕೆಂದು ಜನರೇ ...

Published On :
ಅಹ್ಮದ್ ನಗರ(ಮಹಾರಾಷ್ಟ್ರ): ಇಮಾಂದಾರ್ ಚೌಕಿದಾರ್ ಮತ್ತು ಭ್ರಷ್ಟಾಚಾರಿ ನಾಮ್ದಾರ್ ಮಧ್ಯೆ ಯಾರು ಬೇಕೆಂದು ಜನರೇ ತೀರ್ಮಾನಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.
ಅವರು ಇಂದು ಅಹ್ಮದ್ ನಗರ್ ಮತ್ತು ಶಿರಡಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪರವಾಗಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಭಾರತ ದೇಶ ವಿಶ್ವದಲ್ಲಿ ಸೂಪರ್ ಪವರ್ ದೇಶವಾಗಿ ಗುರುತಿಸಿಕೊಂಡಿದೆ. ಹಿಂದಿನ 10 ವರ್ಷಗಳ ರಿಮೋಟ್ ಕಂಟ್ರೋಲ್ ಸರ್ಕಾರ ನಿಮಗೆ ನೆನಪಿದೆಯೇ? ಹಗರಣಗಳಿಂದ ತುಂಬಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕೂಡ ಹಿಂದಿನ ಸರ್ಕಾರ ವಿಳಂಬ ಮಾಡುತ್ತಿತ್ತು ಎಂದು ಯುಪಿಎ ಸರ್ಕಾರವನ್ನು ಆರೋಪಿಸಿದರು.
ಎಂದಿನಂತೆ ಮೊದಲ ಬಾರಿ ಮತ ಚಲಾಯಿಸುವ ಯುವಜನತೆಯನ್ನು ಕೂಡ ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಭದ್ರತೆ ವಿಚಾರದಲ್ಲಿ ಹಿಂದಿನ ಸರ್ಕಾರ ರಾಜಿ ಮಾಡಿಕೊಂಡಿತ್ತು. ಅದನ್ನು ನೀವು ಒಪ್ಪುತ್ತೀರಾ? ಎಂದು ಕೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PM Narendra ModiAhmednagarಅಹ್ಮದ್ ನಗರLok Sabha Election 2019ಲೋಕಸಭೆ ಚುನಾವಣೆ 2019ಚೌಕಿದಾರಪಿಎಂ ನರೇಂದ್ರ ಮೋದಿNamdarChaukidarನಾಮ್ದಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


