ದೇಶ

ರಾಹುಲ್ ಗಾಂಧಿ ಆಸ್ತಿ ಮೌಲ್ಯ 15.8 ಕೋಟಿ ರೂ., ಸ್ವಂತ ಕಾರು ಇಲ್ಲ!

2014ರಲ್ಲಿ 9.4 ಕೋಟಿ ಇದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಆಸ್ತಿ ಮೌಲ್ಯ ಈ ವರ್ಷಕ್ಕೆ 15.8...

ರಾಹುಲ್ ಗಾಂಧಿ ಆಸ್ತಿ ಮೌಲ್ಯ 15.8 ಕೋಟಿ ರೂ., ಸ್ವಂತ ಕಾರು ಇಲ್ಲ!
ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ
Published On :
ಅಮೇಥಿ: 2014ರಲ್ಲಿ 9.4 ಕೋಟಿ ಇದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಆಸ್ತಿ ಮೌಲ್ಯ ಈ ವರ್ಷಕ್ಕೆ 15.8 ಕೋಟಿಗೆ ಏರಿಕೆಯಾಗಿದೆ.
ರಾಹುಲ್ ಗಾಂಧಿ ನಿನ್ನೆ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದು ಈ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿಡವಿಟ್ಟು ಪ್ರಕಾರ ಅವರ ಚರಾಸ್ತಿ 5 ಕೋಟಿಯ 80 ಲಕ್ಷದ 58 ಸಾವಿರದ 799 ಮತ್ತು ಸ್ಥಿರಾಸ್ತಿ ಮೌಲ್ಯ 10 ಕೋಟಿಯ 08 ಲಕ್ಷದ 18 ಸಾವಿರದ 284 ಆಗಿದ್ದು ಒಟ್ಟು ಆಸ್ತಿ ಮೌಲ್ಯ 15 ಕೋಟಿಯ 88 ಲಕ್ಷದ 77 ಸಾವಿರದ 083 ಆಗಿದೆ.
ಆದರೂ ರಾಹುಲ್ ಗಾಂಧಿಯವರಲ್ಲಿ ಸ್ವಂತ ಕಾರು ಇಲ್ಲ.ಗುರುಗ್ರಾಮ್ ನಲ್ಲಿ ವಾಣಿಜ್ಯ ಸಂಕೀರ್ಣವೊಂದು ಇದ್ದು ಅದರ ಮಾರುಕಟ್ಟೆ ಬೆಲೆ 8 ಕೋಟಿಯ 75 ಲಕ್ಷದ 70 ಸಾವಿರವಾಗಿದೆ. ಕೃಷಿ ಭೂಮಿ 1 ಕೋಟಿಯ 32 ಲಕ್ಷದ 48 ಸಾವಿರದ 284 ರೂಪಾಯಿ ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದು ಅದು ಅವರ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜೊತೆ ಜಂಟಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.