ಚಿನ್ನದ ಚಮಚ ಹಿಡಿದ ಬಾಲಕ ಟೀ ಕುಡಿಯಬಹುದೇ ಹೊರತು ಟೀ ತಯಾರಿಸಲು ಸಾಧ್ಯವಿಲ್ಲ: ಮೋದಿ
ತಮ್ಮ ಹಿನ್ನೆಲೆ ಬಗ್ಗೆ ಟೀಕೆ ಮಾಡುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಚಿನ್ನದ ಚಮಚ ಹಿಡಿದ ಬಾಲಕ ಟೀ ಕುಡಿಯಬಹುದೇ ಹೊರತು ಟೀ ತಯಾರಿಸಲು

Published On :
ಅಸ್ಸಾಂ: ತಮ್ಮ ಹಿನ್ನೆಲೆ ಬಗ್ಗೆ ಟೀಕೆ ಮಾಡುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಚಿನ್ನದ ಚಮಚ ಹಿಡಿದ ಬಾಲಕ ಟೀ ಕುಡಿಯಬಹುದೇ ಹೊರತು ಟೀ ತಯಾರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಸ್ಸಾಂ ನ ಸಿಲ್ಚಾರ್ ನಲ್ಲಿ ಚುನಾವಣಾ ಭಾಷಣ ಮಾಡಿದ ನರೇಂದ್ರ ಮೋದಿ, ಜೀವನದಲ್ಲಿ ಸಣ್ಣ ಸಂತೋಷಗಳ ಬಗ್ಗೆ ಕಷ್ಟ ಪಟ್ಟು ದುಡಿಯುವವರಿಗೆ ಮಾತ್ರ ತಿಳಿದಿರುತ್ತದೆ. ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿರುವವರಿಗೆ ಚಹಾ ಎಲೆಗಳನ್ನು ಆಯ್ಕೆ ಮಾಡುವಾಗ ಕೈ ನಲ್ಲಿ ಕೆಲವೊಮ್ಮೆ ರಕ್ತ ಹರಿಯುತ್ತದೆ ಎಂಬುದು ತಿಳಿದಿರುವುದಿಲ್ಲ. ಅವರಿಗೆ ಟೀ ಮಾಡಲು ವರುವುದಿಲ್ಲ. ಟೀ ಕುಡಿಯಬಹುದಷ್ಟೇ. ಆದರೆ ಈ ಚಾಯ್ ವಾಲ ನಿಮ್ಮ ಜೀವನ ಸುಧಾರಣೆಗೆ ಇರುವ ಯಾವ ಅವಕಾಶವನ್ನೂ ಬಿಡುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


