ದೇಶ

ಉಗ್ರರಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದಾಗ ಕೆಲವರು ನಿದ್ದೆ ಕಳೆದುಕೊಂಡರು: ವಿರೋಧ ಪಕ್ಷಗಳಿಗೆ ಪಿಎಂ ಮೋದಿ ಟಾಂಗ್

ಭಯೋತ್ಪಾದಕರಿಗೆ ಭಾರತ ತಕ್ಕ ತಿರುಗೇಟು ನೀಡಿದಾಗ ಕೆಲವರು ನಿದ್ದೆ ಕಳೆದುಕೊಂಡರು ಎಂದು ಪ್ರತಿಪಕ್ಷಗಳ...

ಉಗ್ರರಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದಾಗ ಕೆಲವರು ನಿದ್ದೆ ಕಳೆದುಕೊಂಡರು: ವಿರೋಧ ಪಕ್ಷಗಳಿಗೆ ಪಿಎಂ ಮೋದಿ ಟಾಂಗ್
ಪ್ರಧಾನ ಮಂತ್ರಿ ನರೇಂದ್ರ ಮೋದಿ
Published On :
ಅಮ್ರೋಹ: ಭಯೋತ್ಪಾದಕರಿಗೆ ಭಾರತ ತಕ್ಕ ತಿರುಗೇಟು ನೀಡಿದಾಗ ಕೆಲವರು ನಿದ್ದೆ ಕಳೆದುಕೊಂಡರು ಎಂದು ಪ್ರತಿಪಕ್ಷಗಳ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶದ ಅಮ್ರೊಹಾ ಪಟ್ಟಣದಲ್ಲಿ ಬಿಜೆಪಿ ರ್ಯಾಲಿಯಲ್ಲಿ ಇಂದು ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದಕರಿಗೆ ಅವರದೇ ಆದ ಭಾಷೆಯಲ್ಲಿ ಭಾರತ ತಕ್ಕ ತಿರುಗೇಟು ನೀಡಿದಾಗ ಕೆಲವರು ಅದನ್ನು ಒಪ್ಪಲಿಲ್ಲ. ಪ್ರತಿಪಕ್ಷಗಳು ಈ ದೇಶದ ನಾಗರಿಕರ ಜೀವನ ಮತ್ತು ಭವಿಷ್ಯವನ್ನು ಅಪಾಯದಲ್ಲಿಟ್ಟಿದೆ ಎಂದು ಆರೋಪಿಸಿದರು.
ಕಳೆದ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ ನಾನು ಸುಮ್ಮನೆ ಕೂರಬೇಕಿತ್ತೆ ಅಥವಾ ಭಯೋತ್ಪಾದಕರ ವಿರುದ್ಧ ದಾಳಿ ನಡೆಸಬೇಕಿತ್ತೆ ಎಂದು ನೆರೆದಿದ್ದ ಜನಸಮೂಹವನ್ನು ಪ್ರಧಾನಿ ಕೇಳಿದರು.
ಭಯೋತ್ಪಾದಕ ದಾಳಿ ನಡೆದ ನಂತರ ಜಗತ್ತಿಗೆ ಪಾಕಿಸ್ತಾನ ಬೆತ್ತಲಾದಾಗ ಇಲ್ಲಿನ ಕೆಲವರು ಪಾಕಿಸ್ತಾನದ ಪರವಾಗಿ ಮಾತನಾಡಲು ಆರಂಭಿಸಿದರು. ಅದು ಕಾಂಗ್ರೆಸ್ ಆಗಿರಲಿ, ಎಸ್ಪಿ, ಬಿಎಸ್ಪಿಯಾಗಿರಲಿ ಇವರೆಲ್ಲಾ ನಿಮ್ಮ ಜೀವವನ್ನು, ಭವಿಷ್ಯವನ್ನು ಅಪಾಯದಲ್ಲಿಟ್ಟಿದ್ದಾರೆ.
ಬುವಾ(ಮಾಯಾವತಿ) ಮತ್ತು ಬಬುವಾ(ಅಖಿಲೇಶ್ ಯಾದವ್) ಸರ್ಕಾರಗಳು ಆರೋಪಿ ಉಗ್ರರನ್ನು ಬಿಡುಗಡೆ ಮಾಡಿ ಅವರ ಪರ ಕರುಣೆ ತೋರಿಸಿದ್ದರು ಎಂದು ಕೂಡ ಮೋದಿ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.