ಪ್ರಧಾನಿ ಹುದ್ದೆಗೆ ಮೋದಿಯೇ ಸೂಕ್ತ, ಗೃಹಿಣಿಯರಿಗೆ ಮಾತ್ರ ರಾಹುಲ್ ಮೇಲೆ ಪ್ರೀತಿ: ಐಎಎನ್ಎಸ್- ಸಿವೊಟರ್ ಸಮೀಕ್ಷೆ
ವಿಶಾಲ ಭಾರತೀಯ ಸಮಾಜದಲ್ಲಿ ಮುಂದಿನ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯವರೇ ಸೂಕ್ತ ಎಂಬ ಅಭಿಪ್ರಾಯವಿದೆ. ಆದರೆ ಗೃಹಿಣಿಯರ ವಲಯದಲ್ಲಿ ಮಾತ್ರವೇ ಮೋದಿ ಹಾಗೂ ....

Published On :
ನವದೆಹಲಿ: ವಿಶಾಲ ಭಾರತೀಯ ಸಮಾಜದಲ್ಲಿ ಮುಂದಿನ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯವರೇ ಸೂಕ್ತ ಎಂಬ ಅಭಿಪ್ರಾಯವಿದೆ. ಆದರೆ ಗೃಹಿಣಿಯರ ವಲಯದಲ್ಲಿ ಮಾತ್ರವೇ ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ಅಂತರ ಅತ್ಯಂತ ಕಡಿಮೆಯಾಗಿದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಸಿವೊಟರ್-ಐಎನ್ಎಸ್ ಪೋಲ್ ಟ್ರ್ಯಾಕರ್ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಶೇ. 63.6 ರಷ್ಟು ನಿರುದ್ಯೋಗಿ ಯುವಕರು ನರೇಂದ್ರ ಮೋದಿಯವರು ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಬೇಕೆಂದು ಹೇಳಿದ್ದಾರೆ. ಇದೇ ವರ್ಗದ ಕೇವಲ ಶೇ. 26ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಅಭಿಪ್ರಾಯಪಟ್ಟರು.
ಗೃಹಿಣಿಯರ ವರ್ಗದಲ್ಲಿ ಶೇ. 43.3 ಮಂದಿ ಮೋದಿ ಪ್ರಧಾನಿಯಾಗಿವುದನ್ನು ನೋಡಲು ಬಯಸಿದ್ದರೆ ಶೇ. 37.2 ರಷ್ಟು ಮಂದಿ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಆಗಬೇಕೆಂದಿದ್ದಾರೆ. ಇತರೆ ವಿಭಾಗ, ವರ್ಗದ ಜನರಲ್ಲಿ ಹೋಲಿಸಿದರೆ ಗೃಹಿಣಿಯರ ವರ್ಗದಲ್ಲಿ ಮೋದಿಪರ ಒಲವಿರುವವರು ಅತ್ಯಂತ ವಿರಳವಾಗಿದ್ದಾರೆ.
ಸರ್ಕಾರಿ ಉದ್ಯೋಗಿಗಳು ಮೋದಿಯನ್ನು ಬಹುವಾಗಿ ಮೆಚ್ಚಿದ್ದು ಅತಿ ಹೆಚ್ಚು ಸಂಖ್ಯೆಯ ಸರ್ಕಾರಿ ಉದ್ಯೋಗಿಗಳು ಮೋದಿ ಮುಂದಿನ ಪ್ರಧಾನಿಯಾಗಬೇಕು ಎಂದಿದ್ದಾರೆ. ಶೇ. 61.1 ರಷ್ಟು ಸರ್ಕಾರಿ ನೌಕರರು ಮೋದಿಯೇ ಮುಂದಿನ ಪ್ರಧಾನಿಯಾಗಲಿ ಎಂದು ಬಯಸಿದರೆ ಕೇವಲ ಶೇ. 26ರಷ್ಟು ನೌಕರರು ಮಾತ್ರವೇ ರಾಹುಲ್ ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂದು ಭಾವಿಸಿದ್ದಾರೆ.
ಗೃಹಿಣಿಯರ ಹೊರತಾಗಿ ಭೂಮಿರಹಿತ ಕೃಷಿ ಕಾರ್ಮಿಕರು, ಸಾಮಾನ್ಯ ಕಾರ್ಮಿಕ ವರ್ಗದಲ್ಲಿ ರಾಹುಲ್ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಆದರೆ ಇದು ಮೋದಿ ಅವರ ಪರವಾಗಿರುವವವ್ರ ಸಂಖ್ಯೆಗೆ ಸಮನಾಗುವುದಿಲ್ಲ.ಭೂರಹಿತ ಕೃಷಿ ಕಾರ್ಮಿಕ ವರ್ಗದ ಶೇ.35.4 ಮಂದಿ ರಾಹುಲ್ ಪರ ಒಲವು ತೋರಿದರೆ ಶೇ. 48.2 ಮತ್ತೆ ಮೋದಿಯನ್ನೇ ಪ್ರಧಾನಿಯಾಗಿ ನೋಡಲು ಬಯಸಿದ್ದಾರೆ. ಸಾಮಾನ್ಯ ಕಾರ್ಮಿಕರ ವಲಯದ ಶೇ. 35 ಮಂದಿ ರಾಹುಲ್ ಪರವಾಗಿದ್ದರೆ ಶೇ.48.9 ಮಂದಿ ಮೋದಿ ಪರವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿRahul Gandhiರಾಹುಲ್ ಗಾಂಧಿಲೋಕಸಭಾ ಚುನಾವಣೆLok Sabha electionsPre Poll Surveyಮತದಾನ ಪೂರ್ವ ಸಮೀಕ್ಷೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


