ಸಂಪಾದಕೀಯ

ದೂರ

Published On :

ದೂರ
=     ದೂರಲೊಂದು ಕಾರಣ
=     ಕೆಲವು ಸಮಸ್ಯೆ ತಲೆದೋರುವುದು ಇದೇ ಕಾರಣದಿಂದ
=     ದಾರಾ ತುಂಬ ದಿನ ತವರಿನಲ್ಲಿದ್ದರೆ 'ರಾರಾ' ಎನ್ನಲು ಪತಿಗಿರುವ ನೆಪ
=     ಇದೊಂದು ಸಾಪೇಕ್ಷ. ಯಾವ ಆಲಂನೆಯನ್ನಿಟ್ಟು ಹೇಳುತ್ತೆವೆಂಬುದು ಮುಖ್ಯ
=     'ಸ್ವಲ್ಪ ಹತ್ತಿರ' ಎನ್ನುವುದು ತುಂಬಾ ಹತ್ತಿರಕ್ಕಿಂತ ಸ್ವಲ್ಪ ದೂರವೇ
=     ದೂರವೂ ಹತ್ತಿರವೆನಿಸುತ್ತದೆ, ಇಂಟರ್ನೆಟ್ ಸಂಪರ್ಕವಿದ್ದರೆ
=     ಹತ್ತಿರವೂ ದೂರವೆನಿಸುತ್ತದೆ ಸಾರಿಗೆ ಸಂಪರ್ಕವಿಲ್ಲದಿದ್ದರೆ
=     ಪೆಟ್ರೋಲ್ ರೇಟ್ ಜಾಸ್ತಿಯಾದ ಹಾಗೆಲ್ಲ ಪ್ರಪಂಚ ದೂರವೇ ಆಗುತ್ತಿದೆ
=     ವಿಳಂಬಕ್ಕೆ ಕೊಡಬಹುದಾದ ಕುಂಟುನೆಪ
=     ಅಹಮ್ಮಿನ ಕೋಟೆ ಕಟ್ಟಿಕೊಂಡರೆ ಸಂಬಂಧಗಳ ವಿಷಯದಲ್ಲಿ ಆಗುವ ಪರಿಣಾಮ
=     ದುರತ್ಯಯವಾದದ್ದು
=     ಭಕ್ತಿಯಿಲ್ಲದವಗೆ ವೈಕುಂಠ ದೂರ, ಪರಿಣತಿಯಿಲ್ಲದೇ ವಾಹನ ಚಲಾಯಿಸುವವಗೆ ಹತ್ತಿರ
=     ದಾರಿಗೆ ಸಂಬಂಧಿಸಿದ್ದು
=     ದುಷ್ಟರಿಂದ ದೂರವಿರದಿದ್ದರೆ ದುರಾಚಾರದಿಂದಲೂ ದೂರವುಳಿಯುವ ಮಾತು ದೂರವೇ ಉಳಿಯಿತು
=     ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣಲು ಕಾರಣವಾದದ್ದು

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.