ಸಂಪಾದಕೀಯ

ಶಾಣ್ಯಾ

Published On :

ಶಾಣ್ಯಾ
=     ಚಾಲೂ ಪದದ ಆಡುಭಾಷೆಯ ಸಮಾನಾರ್ಥಕ
=     ಜಾರುವುದನ್ನು ತಡೆವ ಜೋರುತನ
=     ಒಪ್ಪಿಸಿಕೊಳ್ಳುವುದು ಭೋಳೇತನ, ತಪ್ಪಿಸಿಕೊಳ್ಳುವುದು ಶಾಣ್ಯಾತನ
=     ಉತ್ತರ ಕರ್ನಾಟಕದ ಉದ್ದಾಮ ಪಂಡಿತ
=     ಸ್ವಲ್ಪ ಜಾಸ್ತಿಯಾದರೆ 'ಅಧಿಕ್ ಶಾಣ್ಯಾ' ಎನಿಸಿಕೊಳ್ಳುವವ
=     ಬುದ್ಧಿಯನ್ನು ಬೇಡವಾದ ಕಡೆಗೂ ಬೇಕಾದಂತೆ ಉಪಯೋಗಿಸಿಕೊಳ್ಳಬಲ್ಲವ
=     ಬುದ್ಧಿವಂತನಿಗೆ ಮೂರು ಕಡೆ. ಶಾಣ್ಯಾನಿಗೆ ಮೂರೂವರೆ ಕಡೆ.
=     ಮಿತಿಗಿಂತ ಒಂದು ಇಂಚು ಹೆಚ್ಚು ಜಾಣತನವುಳ್ಳವ
=     ಪೆದ್ದನ ಪೆದ್ದುತನವನ್ನು ಉಪಯೋಗಿಸಿ ತಾನು ಲಾಭ ಪಡೆಯಬಲ್ಲವ
=     ವಾಣಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಂಡವರೆಲ್ಲ ಶಾಣ್ಯಾಗಳೇ
=     ಶಾಣ್ಯಾ ಎನಿಸಿಕೊಳ್ಳುವುದೂ ಶಾಣ್ಯಾತನದ ಸಂಕೇತವೇ. ಶಾಣ್ಯಾ ಇರಲೇಬೇಕೆಂದು ಅರ್ಥವಲ್ಲ
=     ಪರೀಕ್ಷೆಯ ಮುಂಚಿನ ದಿನವೂ ಓದುವವ ದಡ್ಡ. ಆ ದಿನ ಕಾಪಿಚೀಟಿ ರೆಡಿಮಾಡಿಕೊಳ್ಳುವವ ಶಾಣ್ಯಾ
=     ಶಾಣ್ಯಾತನವನ್ನು ಬಳಸಿಕೊಳ್ಳುವುದಕ್ಕೂ ಮತ್ತು ಬೆಳೆಸಿಕೊಳ್ಳುವುದಕ್ಕೂ ಶಾಣ್ಯಾನೇ ಆಗಿರಬೇಕು
=     ಕಷ್ಟಪಟ್ಟು ದೇಹ ಬೆಳೆಸಿಕೊಳ್ಳುವವರು ಶ್ರಮಿಗಳು. ಅವರನ್ನು ಬೇಕೆಂದಾಗ ಬಳಸಿಕೊಳ್ಳುವವರು ಶಾಣ್ಯಾಗಳು
=     ಪ್ರಜ್ಞಾವಂತರು ವೋಟ್ ಮಾಡುತ್ತಾರೆ. ಶಾಣ್ಯಾಗಳು ಸಾಮಾಜಿಕ ತಾಣಗಳಲ್ಲಿ ಬೊಂಬಡ ಹೊಡೆಯುತ್ತಾರೆ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.