ನಗುವಾಗ ಎಲ್ಲರೂ ನೆಂಟರು. ಅಳುವಾಗ?
ಕೆ.ಎಂ. ಲಿಂಗರಾಜು, 9916021365
ಮೋದಿ ಪ್ರಧಾನಿಯಾದರೆ ದೇಶಬಿಟ್ಟು ಹೋಗುತ್ತೇನೆ ಎಂದಿದ್ದವರು ಈಗ ಎಲ್ಲೂ ಹೋಗಲ್ಲ ಎನ್ನುತ್ತಿದ್ದಾರಲ್ಲಾ?
ಅದಿಕ್ಕೇ ಅವರನ್ನು ಅಪಘಾನಿಸ್ಥಾನದಲ್ಲಿ ಭಾರತದ ರಾಯಭಾರಿಯಾಗಿ ಮಾಡಿದರೆ ಹೇಗೆ ಎಂದು ಸುಷ್ಮಾ ಸ್ವರಾಜ್ ಯೋಚಿಸುತ್ತಿದ್ದಾರಂತೆ!
ತಲವಾಟ ಮಂಜುನಾಥ, ಸಾಗರ, 9480931611
ನಗುವಾಗ ಎಲ್ಲರೂ ನೆಂಟರು. ಅಳುವಾಗ?
ಎಲ್ಲರಿಗೂ ಕರ್ಚೀಫು ಗಲೀಜಾಗುತ್ತೆ ಎಂಬ ಟೆನ್ಷನ್ನು!
ವಿ. ಹೇಮಂತಕುಮಾರ, 9916707979
ಸ್ತ್ರೀಯರ ಅರೆಮೈ ಶೃಂಗಾರ ನಾಗರೀಕತೆಯ ಸಂಕೇತವೇ?
ಅರೆಮೈ ಇದ್ದರೂ ಹುಡುಗರು ಕಣ್ಣೆತ್ತಿ ನೋಡದೇ ಹೋಗುವುದು ನಾಗರೀಕತೆ!
ತಲವಾಟ ಮಂಜುನಾಥ, ಸಾಗರ, 9480931611
ತಾಯಿಯ ಕೈತುತ್ತು ತಿಂದು ಬೆಳೆದ ಮಕ್ಕಳು ನಂತರ ತಾಯಿಯನ್ನೇ ಮನೆಯಿಂದ ಹೊರಹಾಕುವುದೇಕೆ?
ಜಗತ್ತಿನಲ್ಲಿ ತುತ್ತಿಗಿಂತ ಮುತ್ತಿಗೇ ಹೆಚ್ಚು ಬೆಲೆ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಕೇಜ್ರಿವಾಲ್ ಮೋದಿ ಸ್ಥಾನದಲ್ಲಿದ್ದಿದ್ದರೆ ಏನು ಮಾಡುತ್ತಿದ್ದರು?
ಆಡ್ವಾಣಿ ಮನೆ ಎದುರು ಧರಣಿ ಕುಳಿತೇ ಚುನಾವಣೆ ಕಳೆದುಬಿಡುತ್ತಿದ್ದರು!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

