ದಿಗ್ವಿಜಯ್ ಮಾಡಿದ್ದು ಸರಿ ಅಲ್ಲ ಅಂದ್ರಂತೆ ಪೂಜಾರಿ?
ಡಬ್ಲ್ಯು.ಕೆ. ವೆಂಕಟೇಶಮೂರ್ತಿ, ಬೆಂಗಳೂರು
ಚುನಾವಣೆ ಫಲಿತಾಂಶಕ್ಕೂ ಮುನ್ನವೇ ರಾಜ್ಯ ಸರ್ಕಾರಕ್ಕೆ ಜನಗಳ ಮೇಲೆ ಏರಿಕೆಯ ಚಾಟಿ ಬೀಸುವ ಆಕ್ರೋಶ ಬಂದಿದೆಯಲ್ಲ?
ಜನ ತಮಗೆ ಮತ ಹಾಕಿಲ್ಲ ಎಂಬುದು ಖಾತರಿಯಾದಂತಿದೆ!
ಶ್ರೀಧರ್ ಡಿ. ರಾಮಚಂದ್ರಪ್ಪ, 9880791106
ಪರೀಕ್ಷೆ ಫಲಿತಾಂಶದಲ್ಲಿ ಹುಡುಗಿಯರದ್ದೇ ಮೇಲುಗೈ ಇರುತ್ತದಲ್ಲಾ ಯಾಕೆ?
ಹುಡುಗರು ಓದುವುದಕ್ಕಿಂತ ಹೆಚ್ಚು ಸಮಯವನ್ನು ಹುಡುಗಿಯರಿಗೆ ಮೀಸಲಿಡುವುದರಿಂದ!
ಆರ್.ಬಿ.ಸಿ. ಕೆ.ಆರ್. ನಗರ
ನಮ್ಮ ವೃದ್ಧ ರಾಜಕಾರಣಿಗಳಲ್ಲಿ ದೇಶದ ಮೇಲಿನ ಪ್ರೇಮಕ್ಕಿಂತ ಹೆಣ್ಣಿನ ಮೇಲಿನ ಮೋಹವೇ ಜಾಸ್ತಿಯಾಗಿದೆಯಲ್ಲ?
'ದೇಶಪ್ರೇಮ'ದಲ್ಲಿ ಅವರು 'ಪ್ರೇಮ'ವನ್ನಷ್ಟೇ ಇರಿಸಿಕೊಂಡಿದ್ದಾರೆ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ದಿಗ್ವಿಜಯ್ ಮಾಡಿದ್ದು ಸರಿ ಅಲ್ಲ ಅಂದ್ರಂತೆ ಪೂಜಾರಿ?
ಮೋದಿ ಹೆಂಡತಿ ಬಗ್ಗೆಯಷ್ಟೇ ಅವರು ವಿಚಾರ ಮಾಡಿದ್ರೆ ಸಾಕು ಅಂದ್ರಂತೆ ಡಿಗ್ಗಿ!
ಎ.ಎಚ್. ಪ್ರಕಾಶಕುಮಾರ, 9886016328
ಮನುಷ್ಯರನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ವಸ್ತುಗಳನ್ನು ಪ್ರೀತಿಸುತ್ತಿದ್ದಾರಲ್ಲ. ಯಾಕೆ?
ವಸ್ತುಗಳಿಗೆ ಮನಸ್ಸು ಮತ್ತು ಅಭಿಪ್ರಾಯ ಎರಡೂ ಇರುವುದಿಲ್ಲ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

