ಅನುಚಿತ
ಉಚಿತವಾಗಿ ದೊರೆಯುತ್ತದೆಂದು ಸಿಕ್ಕಿದ್ದನ್ನೆಲ್ಲ ಕೊಳ್ಳುವುದು ಅನುಚಿತವೇ ಸರಿ
ಬಾಡಿಗೆಗೆ ಅಥವಾ ಮಾರಾಟಕ್ಕೆ ಎಂಬ ಬೋರ್ಡ್ ಇರುವುದೆಲ್ಲ ಅನುಚಿತವೇ
ಭೂಷಣವಲ್ಲದ್ದೆಲ್ಲ ಅನುಚಿತವೇ. ಅತಿಯಾದ ಭಾಷಣವೂ ಆದೀತು
ದಾಕ್ಷಿಣ್ಯ ಹೀನ ನಡವಳಿಕೆ
ಉಚಿತವಲ್ಲದ್ದೆಲ್ಲ ಅನುಚಿತವಲ್ಲ. ಆದರೆ ಅನುಚಿತವೆಲ್ಲ ಉಚಿತವಲ್ಲದ್ದೇ
ಇಂತಲ್ಲಿ ಹೀಗೇ ನಡೆದುಕೊಳ್ಳಬೇಕೆಂಬ ಖಚಿತ ನಿಯಮಗಳಿದ್ದಾಗ್ಯೂ ಅವುಗಳನ್ನು ಮೀರುವಿಕೆ
ಮಾತಾಡಲು ಹಣ ತೆರಬೇಕಿಲ್ಲ. ಅದು ಉಚಿತ. ಹಾಗಂತ ಏನೇನೋ ಮಾತಾಡಿದರೆ ಅದು ಅನುಚಿತ.
ಸುತ್ತಮುತ್ತ ಸೇರಿದಂತೆ ಎತ್ತೆತ್ತ ಹೇಗಿರಬೇಕೆಂಬ ಪ್ರಜ್ಞೆಯಿಲ್ಲದ ನಡವಳಿಕೆ
ಹುಡುಗಿಗೆ ಸೀಟು ಬಿಟ್ಟುಕೊಡುವವರು ಮುದುಕಿ ಬಂದಾಗ ಕೂತಲ್ಲಿಂದ ಏಳದಿರುವಿಕೆ
ಅನುಚಿತ ನಡವಳಿಕೆಗೆ ಉಚಿತ ಶಿಕ್ಷೆ ಖಚಿತ
ಉಚಿತವಾಗಿ ಕೊಡುವ ಹೆಸರಿನಲ್ಲಿ ಗ್ರಾಹಕರ ಸಂಚಿತವನ್ನು ಕರಗಿಸುವ ವ್ಯಾಪಾರಿಗಳ ಕ್ರಮ
ಸಭೆಯ ಮಧ್ಯೆಯೇ ಮೊಬೈಲ್ನಲ್ಲಿ ದೊಡ್ಡದಾಗಿ ಮಾತನಾಡುವುದು
ಪಾರ್ಟಿಗೆ ಹೋಗಿಯೂ ಗುಂಡು ಹಾಕದಿರುವುದು
ಸ್ಟಾರ್ ಹೊಟೇಲಿನಲ್ಲಿ ಪ್ಲೇಟ್ನಲ್ಲಿ ಏನನ್ನೂ ಉಳಿಸದಂತೆ ತಿನ್ನುವುದು
ಟೀ ಕುಡಿಯುವಾಗ ಮೈ ಮೇಲೆ ಬೀಳಿಸಿಕೊಳ್ಳುವುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

