ಸೌಂದರ್ಯ
ಇತರರನ್ನು ತನ್ನತ್ತ ಸೆಳೆಯುವ ಮುಖದಲ್ಲಿನ ಕಳೆ
= ಇದು ದೇಹದ ಯಾವ ಭಾಗದಲ್ಲಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗದು
= ಅವರವರ ದೃಷ್ಟಿಗೆ ತಕ್ಕಂತೆ ಬದಲಾಗುವಂಥದ್ದು
= ಬ್ಯೂಟಿ ಪಾರ್ಲರ್‌ಗಳ ಹುಟ್ಟಿಗೆ ಕಾರಣವಾದ ಅಂಶ
ಅಲಂಕಾರದಿಂದ ಹೆಚ್ಚಿಸಿಕೊಳ್ಳಬಹುದೆಂದೇ ಎಲ್ಲರೂ ನಂಬಿರುವ ಇದಕ್ಕೆ ಮಾತ್ರ 'ಅಲಂ' (ಸಾಕು) ಎನ್ನುವುದಿಲ್ಲ
= ಹೆಣ್ಣನ್ನು ಸೌಂದರ್ಯದ ಗಣಿ ಎನ್ನುತ್ತಾರೆ. ಗಂಡನನ್ನು ಗಣಿಧಣಿ ಎನ್ನಬಹುದು
= ಸೌಂದರ್ಯದ ಗಣಿ ಅಗೆದರೆ ಸಿಗುವುದು ಧೂಳೇ (ಪೌಡರ್)
= ಸೌಂದರ್ಯವನ್ನು ಹೆಣ್ಣಿಗೆ ಕೊಟ್ಟ ದೇವರು ಬುದ್ಧಿಯನ್ನು ಮಾತ್ರ ಗಂಡಿಗೇ ಇಟ್ಟುಬಿಟ್ಟ
= ಗಂಡಸರು ಮರುಳಾಗುವ 'ಮರುಳು'ಗಾಡಿನ ಓಯಸಿಸ್
= ಮನ್ಮಥನ ಮನೋ ಮಥನದ ಕಡಗೋಲು
= ಇತ್ತ ದರಿ, ಅತ್ತ ಸುಂದರಿ ಎನ್ನುವಂತೆ ಮಾಡುವ ಅಂಶ
= ಮದುವೆ ಎಂಬ ಅಪಾಯಕಾರಿ ತಗ್ಗಿಗೆ ಜಾರಿ ಬೀಳಲು ಕಾರಣವಾಗುವ ಜಾರುಕ
= ಜಗತ್ತಿನ ಅತ್ಯಂತ ದೊಡ್ಡ ಮೂಢನಂಬಿಕೆಯೆಂದರೆ ಇದನ್ನು ಬಣ್ಣ ಹಚ್ಚಿ ಹೆಚ್ಚಿಸಿಕೊಳ್ಳಬಹುದು ಎಂಬುದು
= ಇದು ದೇಹದ ಹೊರಗಡೆಯಿದೆ ಎಂದುಕೊಂಡರೆ ಇದಕ್ಕೆ ವೃದ್ಧಾಪ್ಯವಿದೆ
ಬಾಹ್ಯ ಸೌಂದರ್ಯದಷ್ಟೇ ಒಳಗಿನ ಸೌಂದರ್ಯ ಕೂಡ ಮುಖ್ಯ. ಹಾಗಾಗಿಯೇ ಉತ್ತಮ ಚೆಡ್ಡಿಯನ್ನೇ ಧರಿಸಬೇಕು
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

