ದೇಶಕ್ಕಾಗಿ ನೊಬೆಲ್ ಪ್ರಶಸ್ತಿ ತಿರಸ್ಕರಿಸಿದ!
ರಷ್ಯಾ ಕ್ರಾಂತಿ ನಡೆದು ಸಾಮಾಜಿಕ ಪರಿವರ್ತನೆಯಾಗುತ್ತಿತ್ತು. ರಷ್ಯಾ, ವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಿತ್ತು. ಆದರೆ ಲೇಖಕರು ಅದರ ಗುಣಗಳನ್ನು ವರ್ಣಿಸಿ ಬರೆಯಬೇಕಿತ್ತು. ಆದರೆ ಬೋರಿಸ್ ತಮ್ಮ ಕಾದಂಬರಿ ಡಾ.ಜಿವಾಗೋದಲ್ಲಿ ರಷ್ಯಾ ಕ್ರಾಂತಿಯ ಆನಂತರದ ಘಟನೆಗಳನ್ನು ಕಟುವಾಗಿ ಟೀಕಿಸಿ ಬರೆದಿದ್ದರು. ಮನುಷ್ಯರನ್ನು ಯಂತ್ರಗಳನ್ನಾಗಿ ಮಾರ್ಪಡಿಸುವ ಪ್ರವೃತ್ತಿಯನ್ನು ವಿರೋಧಿಸಿ ಮಾನವನ ಹಿರಿಮೆಯನ್ನು ಎತ್ತಿ ಹಿಡಿಯುವ ಈ ಕಾದಂಬರಿ ಸೋವಿಯತ್ ರಷ್ಯಾದ ವ್ಯವಸ್ಥೆಯನ್ನು ತೀಕ್ಷ್ಣವಾಗಿ ನೋಡುವ ಕ್ರಮವಾಗಿತ್ತು. ಕಾದಂಬರಿಯಲ್ಲಿ ಡಾ.ಜಿವಾಗೋನೊಡನೆ ಪ್ರೇಮ ಬೆಳೆಸಿದ ಲಾರಾಳು ರಷ್ಯದ ಸಂಕೇತವಾಗಿದ್ದು, ಅದು ರಷ್ಯಾ ಜನಜೀವನದ ನೈಜ ಕತೆಯಾಗಿತ್ತು. ಈ ಕಾದಂಬರಿಯನ್ನು ಸೋವಿಯತ್‌ನ ಯಾವ ಪತ್ರಿಕೆಗಳೂ ಪ್ರಕಟಿಸಲು ಮುಂದಾಗಲಿಲ್ಲ. ಆಗ ಅದನ್ನು ಇಟಲಿಯ ಪ್ರಕಾಶಕರೊಬ್ಬರಿಗೆ ಕಳುಹಿಸಲಾಯಿತು. ಅದು ಅಲ್ಲಿ ಪ್ರಕಟವಾಗಿ ಜಗತ್ತಿನ ಗಮನ ಸೆಳೆಯಿತು. 1958ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಸಹ ಘೋಷಿಸಲಾಯಿತು. ದಿನ ಬೆಳಗಾಗುವುದರೊಳಗೆ ಬೋರಿಸ್‌ಪಾಸ್ಟರ್‌ನಾಕ್ ಪ್ರಖ್ಯಾತಿ ಪಡೆದರು. ಇಡೀ ಜಗತ್ತೇ ಬೋರಿಸ್ ಅವರ ಸಾಧನೆಯನ್ನು ಹೊಗಳುತ್ತಿತ್ತು. ಸೋವಿಯತ್ ಲೇಖಕರು ಬೋರಿಸ್‌ರನ್ನು ಕಟುವಾಗಿ ಟೀಕಿಸಿ, ಅವರೊಬ್ಬ ದೇಶದ್ರೋಹಿಯೆಂದೂ, ದೇಶಪ್ರೇಮವಿದ್ದರೆ ಮೊದಲು ಬಹುಮಾನವನ್ನು ತಿರಸ್ಕರಿಸಲಿ ಎಂದು ಕರೆ ನೀಡಿದರು. ಅಲ್ಲದೆ, ಅವರನ್ನು ಸೋವಿಯತ್ ಲೇಖಕರ ಸಂಘದಿಂದ ಉಚ್ಚಾಟಿಸಲಾಯಿತು. ಹೀಗಾಗಿ ಸೋವಿಯತ್ ಸರ್ಕಾರ ಮತ್ತು ಜನತೆ ಸಹ "ಬೇಕಾದರೆ ಆ ಕೆಟ್ಟ ಬಹುಮಾನವನ್ನೂ, ಪದಕ ಮತ್ತು ಹಣವನ್ನು ಪಡೆಯಲಿ. ಆದರೆ ಅದನ್ನು ಪಡೆದರೆ ಮತ್ತೆ ದೇಶಕ್ಕೆ ಮರಳಬಾರದು" ಎಂದು ತಾಕೀತು ಮಾಡಲಾಯಿತು.
ಬೋರಿಸ್ ತಮ್ಮ ದೇಶವನ್ನು ತೀವ್ರವಾಗಿ ಪ್ರೀತಿಸುತ್ತಿದ್ದುದರಿಂದ ತಾಯ್ನೆಲವನ್ನು ಬಿಡುವುದೆಂದರೆ ಸಾವಿಗಿಂತಲೂ ಕಠೋರ ಎಂಬ ನಿರ್ಧಾರಕ್ಕೆ ಬಂದಿದ್ದರು. ತಾನು ಇಲ್ಲೇ ಸತ್ತೇನು, ಆದರೆ ದೇಶಬಿಟ್ಟು ಹೋಗುವುದಿಲ್ಲ ಎಂದು ನಿರ್ಧರಿಸಿದ್ದಲ್ಲದೆ, ಈ ಬಗ್ಗೆ ರಷ್ಯದ ಪ್ರಧಾನಿ ಕ್ರುಶ್ಚೋವ್ ಅವರಿಗೂ ಪತ್ರ ಬರೆದು ತಮ್ಮ ನಿಲುವನ್ನು ತಿಳಿಸಿದರು. ಅದರಂತೆ ವಿಶ್ವದ ಶ್ರೇಷ್ಠ ಪ್ರಶಸ್ತಿಯನ್ನು ದೇಶಕ್ಕಾಗಿ ತಿರಸ್ಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

