ಸಂಪಾದಕೀಯ

ಅನುಮತಿ

Published On :

ಅನುಮತಿ
    ಮಾತು ಮಾತಿಗೂ ಕೇಳಬೇಕಾದ ಶ್ರೀಮತಿಯ ಸಮ್ಮತಿ
    ಅಪ್ಪುಗೆಗೂ ಮುನ್ನ ಬೇಕಾದ ಒಪ್ಪಿಗೆ
    ರಜಾ ತೆಗೆದುಕೊಳ್ಳಲೂ ಬೇಕು ಬಾಸ್‌ನ ಓಕೆ
    ಅಸ್ತು ಮಂತ್ರ
    ಸರೀನಾ ಎಂದಾಗ ಸರಿ ಸರಿ ಎಂದರೆ ಅದು ಅನುಮತಿ
    ತನ್ನ ಮಿತಿಯನ್ನು ಅರಿತವ ಇದನ್ನು ಕೇಳುತ್ತಾನೆ
    ಹೆಂಡತಿ ಕೇಳಿದ್ದಕ್ಕೆಲ್ಲಾ ಅನುಮತಿ ಕೊಟ್ಟುಬಿಡಬೇಕು, ಅದರಲ್ಲೂ ಆಕೆ ತವರು ಮನೆಗೆ ಹೋಗುವೆನೆಂದಾಗ
    ಅನುಮತಿಯಿಲ್ಲದೇ ಕಾರ್ಯವೆಸಗಬಾರದು. ವೈಫಲ್ಯವನ್ನು ಬೇರೆಯವರಿಗೆ ಅಂಟಿಸಲಾಗುವುದಿಲ್ಲ
    ಒಳ್ಳೆಯ ಕೆಲಸಕ್ಕೆ ಯಾರಪ್ಪನ ಅಪ್ಪಣೆಗೂ ಕಾಯಬಾರದು
    ಜೀವನದಲ್ಲಿ ಕೆಲವರು ವಿನೀತತೆಯನ್ನು ಪ್ರದರ್ಶಿಸುವುದು ಬಾಸ್ ಬಳಿ ರಜೆಗೆ ಅನುಮತಿ ಸ್ವೀಕರಿಸುವಾಗ ಮಾತ್ರ
    ಎಲ್ಲದಕ್ಕೂ ಮಿತಿಯಿದೆ; ಆದರೆ ಅನುಮತಿ ಕೇಳುವುದಕ್ಕಲ್ಲ
    ಉತ್ತಮ ಗಂಡ ಅನುಮತಿ ಕೇಳುತ್ತಾನೆ ಮತ್ತು ಉತ್ತಮ ಹೆಂಡತಿ ಅನುಮತಿ ನೀಡುತ್ತಾಳೆ
    ಅನುಮತಿಯಿಲ್ಲದೇ ಮಾಡುವ ಕೆಲಸಕ್ಕೆ ನಾವೇ ಹೊಣೆ ಹೊರಬೇಕಾಗುತ್ತದೆ
    ಕಿರಿಯರ ಆಸೆಗೆ ಹಿರಿಯರು ನೀಡುವ ಬೆಂಬಲ

ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.