ಸಂಪಾದಕೀಯ

ಪ್ರಯೋಜನ

Published On :

ಯೋಜಕರಿಲ್ಲದಿದ್ದರೆ ಅದೆಷ್ಟು ಸಂಪನ್ಮೂಲವಿದ್ದರೂ ಅದು ಪ್ರಯೋಜನಕ್ಕೆ ಬಾರದೇ ನಿಷ್ಪ್ರಯೋಜಕವಾಗುತ್ತವೆ
    ಪ್ರಯೋಜನವಿಲ್ಲದೇ ನಾವು ಮಾಡುವ ಕೆಲಸಗಳಲ್ಲಿ ಮೂರ್ಖನಿಗೆ ಉಪದೇಶ ಮಾಡುವುದೂ ಒಂದು
    ಯಾವುದೇ ವಸ್ತು ಖರೀದಿಸುವ ಮೊದಲು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದದ್ದು ಇದನ್ನೇ
    ಪ್ರಾಯೋಜಕರು ಸಿಗುತ್ತಾರೆಂದು ಪ್ರಯೋಜನವಿಲ್ಲದ ಕೆಲಸ ಮಾಡಬಾರದು
    ಪ್ರಯತ್ನ ಪೂರ್ವಕವಾಗಿ ಸಿದ್ಧಿಸಿಕೊಳ್ಳಬೇಕಾದದ್ದು
    ಯಾವುದೇ ದೇಶಕ್ಕೆ ಹೋಗಬೇಕಾದರೂ ಇಟ್ಟುಕೊಳ್ಳಬೇಕಾದ ಉದ್ದೇಶ
    ಮನದಲ್ಲಿ ಬಯಕೆ ಮೂಡಿದಾಗ ಮನಕ್ಕೆ ಕೇಳಿಕೊಳ್ಳಬೇಕಾದ ಪ್ರಶ್ನೆ ಇದೇ
    ಮನದನ್ನೆಯ ಕಾಮನೆಗಳಿಗೆ ಈ ಪ್ರಶ್ನೆಯನ್ನು ಕೇಳಲಾಗುವುದಿಲ್ಲ
    ಪ್ರಯೋಜನವಿಲ್ಲವೆಂದು ತಿಳಿದಿದ್ದರೂ ಮಾಡಲೇಬೇಕಾದ ಕೆಲಸವೆಂದರೆ ಕಾಲೇದು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು
    ಇದನ್ನು ಅರ್ಥ ಎಂತಲೂ ಕರೆಯುತ್ತಾರೆ. ಅರ್ಥ(ಹಣ)ವೇ ಎಲ್ಲ ಕಾರ್ಯಗಳ ಪರಮಾರ್ಥ
    ಅರ್ಥವಿಲ್ಲದ ಕಾರ್ಯ ವ್ಯರ್ಥವೇ ಸರಿ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.