ಸಂಪಾದಕೀಯ

ಅಬ್ಧಿ

Published On :

ಶತಾಬ್ದವನ್ನು ದಾಟಿದವರಿಂದಲೂ ದಾಟಲಾಗದ್ದು
    ಹಸ್ತಸಾಮುದ್ರಿಕ ನೋಡುವ ಜ್ಯೋತಿಷಿಗಳಿಂದಲೂ ಹೇಳಲಾಗದಷ್ಟು ವಿಸ್ತೀರ್ಣದ 'ಸಮುದ್ರ'
    ಅಪಾರ 'ಅಕೂಪಾರ'
    ಪರಿವಾರವನ್ನೆಲ್ಲ ತೊರೆದ ಪರಿವ್ರಾಜಕ ದಾಟಬಾರದ 'ಪಾರಾವಾರ'
    ಸರಸರನೇ ಹರಿದು ಹೋಗುವ ನದಿಗಳ ರಾಜ ಈ 'ಸರಿತ್ ಪತಿ'
    ಉಧೋ ಉಧೋ ಎಂದು ಶಬ್ದಗರೆಯುತ್ತಾ ದಧಿಯಂಥ ನೊರೆಯನ್ನು ಹೊರಹಾಕುವ 'ಉದಧಿ'
    ಸಿಂಧೂ ಬಯಲಿನ ನಾಗರೀಕತೆಗಿಂತಲೂ ಮುಂಚೆಯೇ ಹಿಂದೂಸ್ಥಾನವನ್ನು ಸುತ್ತುವರಿದಿದ್ದ 'ಸಿಂಧು'
    ಇದರ ವೈಶಾಲ್ಯವ ಈಕ್ಷಿಸಿದವನಿಗೆ ಗರ ಬಡಿಸುವ 'ಸಾಗರ'
    ಅರುಣನಿಂದ ಹೊಡೆತ ತಿಂದ ಹನೂಮಾನ್ ಹಾರಿದ 'ಅರ್ಣವ'
    ರತ್ನ, ವೈಢೂರ್ಯಗಳನ್ನೆಲ್ಲ ತನ್ನ ಗರ್ಭದಲ್ಲಿ ಧರಿಸಿರುವ 'ರತ್ನಾಕರ'


ವಿಶ್ವನಾಥ ಸುಂಕಸಾಳ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.